ADVERTISEMENT

ಅಮೆರಿಕದ ಮಿತ್ರ ರಾಷ್ಟ್ರ ಭಾರತ?

ಪಿಟಿಐ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ವಾಷಿಂಗ್ಟನ್‌: ವಿಶ್ವದ ಮೇಲೆ ಅಮೆರಿಕ ಹೊಂದಿದ್ದ ಹಿಡಿತ ಸಡಿಲಗೊಳ್ಳುತ್ತಿದ್ದು, ಅದನ್ನು ಮತ್ತೆ ಬಲಿಷ್ಠಗೊಳಿಸಲು ಅಮೆರಿಕ ಭಾರತವನ್ನು ಮಿತ್ರರಾಷ್ಟ್ರವಾಗಿ ಪರಿಗಣಿಸುವ ಸಾಧ್ಯತೆ ಇದೆ.
 
 ಅಮೆರಿಕ ಸಂಸತ್ತಿನ ಹಿರಿಯ ಪ್ರತಿನಿಧಿಗಳು, ರಾಜತಾಂತ್ರಿಕ ಅಧಿಕಾರಿಗಳು ಮತ್ತು  ಭದ್ರತಾ ನಾಯಕರ ಮಧ್ಯೆ ನಡೆದ ಚರ್ಚೆಯಲ್ಲಿ ಭಾರತವನ್ನು ಮಿತ್ರರಾಷ್ಟ್ರವಾಗಿಸಿದರೆ ಮತ್ತೆ ವಿಶ್ವದ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
 
ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ  ಪ್ರಜಾಪ್ರಭುತ್ವ ಹೊಂದಿರುವ ಎರಡು ರಾಷ್ಟ್ರಗಳು ಮಿತ್ರರಾಗುವ ಸಾಧ್ಯತೆಗಳಿವೆ ಎಂದು  ಮಾಜಿ ಭದ್ರತಾ ಸಲಹೆಗಾರ ಸ್ಟಿಫನ್‌ ಹೆಡ್ಲಿ ಹೇಳಿದ್ದಾರೆ. 
 
‘ನಮ್ಮ ಮುಂದೆ ಅನೇಕ ಸವಾಲುಗಳಿರುವುದರಿಂದ ಸದ್ಯದ ಸ್ಥಿತಿಯಲ್ಲಿ ವಿಶ್ವದ ಮೇಲೆ ಹಿಡಿತ ಸಾಧಿಸಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದು ಯೋಗ್ಯವಾದ ವಿಚಾರವಾಗಿದೆ’ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ  ಮೆಡೆಲೀನ್ ಆಲ್ಬ್ರೈಟ್ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.