ADVERTISEMENT

ಆಂಡ್ರ್ಯೂಸ್‌ : ಆತಂಕ ಸೃಷ್ಟಿಸಿದ ವದಂತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಮೇರಿಲ್ಯಾಂಡ್ (ರಾಯಿಟರ್ಸ್‌): ಅಮೆರಿಕದ ಅಧ್ಯಕ್ಷರು ಪ್ರಯಾಣಿಸುವ ವಿಮಾನ ಇರುವ ‘ಜಾಯಿಂಟ್ ಬೇಸ್ ಆಂಡ್ರ್ಯೂಸ್‌’ ವಾಯುನೆಲೆಗೆ ಸೆರೆಯಿಂದ ತಪ್ಪಿಸಿಕೊಂಡಿರುವ ಶಸ್ತ್ರಧಾರಿಯೊಬ್ಬ ನುಗ್ಗಿದ್ದಾನೆ ಎಂಬ ವದಂತಿ ಹರಡಿ, ಕೆಲ ಕಾಲ ಆತಂಕ ಸೃಷ್ಟಿಸಿತು.

ಆದರೆ, ಗುರುವಾರ ರಾತ್ರಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಾಯುನೆಲೆ ಅಧಿಕಾರಿಗಳು, ‘ಭದ್ರತಾ ಪಡೆಗಳ ತುರ್ತು ಸೇವೆಗಳ ತಂಡ ಮಾಮೂಲಿ ತಪಾಸಣೆ ನಡೆಸುತ್ತಿತ್ತು. ಅದನ್ನು ತಪ್ಪಾಗಿ ಗ್ರಹಿಸಿದ ಕಾರಣಕ್ಕೆ, ಶಸ್ತ್ರಧಾರಿಯೊಬ್ಬ ನುಗ್ಗಿದ್ದಾನೆ ಎಂಬ ವದಂತಿ ಹರಡಿತು’ ಎಂದು ಹೇಳಿದ್ದಾರೆ.

‘ಜಾಯಿಂಟ್ ಬೇಸ್ ಆಂಡ್ರ್ಯೂಸ್‌’ ಅಮೆರಿಕದ ಮಿಲಿಟರಿಗೆ ಸೇರಿದ ವಾಯುನೆಲೆ. ಅಧ್ಯಕ್ಷ ಬರಾಕ್ ಒಬಾಮ ಅವರ ಕಾರ್ಯಕ್ರಮ ಪಟ್ಟಿಯಲ್ಲಿ ಗುರುವಾರ ಈ ವಾಯುನೆಲೆ ಬಳಸುವುದು ಇರಲಿಲ್ಲ.

ವಾಯುನೆಲೆಗೆ ಬಂದೂಕುಧಾರಿಯೊಬ್ಬ ನುಗ್ಗಿದರೆ ಪರಿಸ್ಥಿತಿ ಎದುರಿಸುವುದು ಹೇಗೆ ಎಂಬ ಬಗ್ಗೆ ಗುರುವಾರ ಅಣಕು ಕಾರ್ಯಾಚರಣೆ ನಡೆಯಬೇಕಿತ್ತು. ಈ ವಾಯುನೆಲೆಯು ಶ್ವೇತಭವನದಿಂದ 24 ಕಿ.ಮೀ. ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.