ADVERTISEMENT

ಆಸ್ಟ್ರೇಲಿಯಾದಲ್ಲಿ ಭಾರತೀಯನ ಮೇಲೆ ಹಲ್ಲೆ

ಏಜೆನ್ಸೀಸ್
Published 22 ಮೇ 2017, 11:57 IST
Last Updated 22 ಮೇ 2017, 11:57 IST
ಕೃಪೆ: ಎಎನ್‍ಐ
ಕೃಪೆ: ಎಎನ್‍ಐ   

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ 25ರ ಹರೆಯದ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆದಿದೆ. ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾದಲ್ಲಿ ಹಾಸ್ಪಿಟಾಲಿಟಿ ವಿದ್ಯಾರ್ಥಿಯಾಗಿರುವ ಪ್ರದೀಪ್ ಸಿಂಗ್ ಟ್ಯಾಕ್ಸಿ ಚಾಲಕರೂ ಆಗಿದ್ದಾರೆ. ಶನಿವಾರ ರಾತ್ರಿ ಪ್ರದೀಪ್ ಟ್ಯಾಕ್ಸಿ ಓಡಿಸುತ್ತಿದ್ದಾಗ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ವಾಂತಿ ಮಾಡಲು ಶುರು ಮಾಡಿದ್ದಾಳೆ. ಆ ಹೊತ್ತಲ್ಲಿ ಪ್ರದೀಪ್, ನೀವು ಟ್ಯಾಕ್ಸಿಯನ್ನು ಗಲೀಜು ಮಾಡಿದರೆ ಇದನ್ನು ಸ್ವಚ್ಛಗೊಳಿಸುವ ಶುಲ್ಕವನ್ನೂ ನೀವೇ ಕೊಡಬೇಕು. ಹಾಗಾಗಿ ಟ್ಯಾಕ್ಸಿಯಿಂದ ಇಳಿಯಿರಿ ಎಂದು ಹೇಳಿದ್ದಾರೆ.

ಇದಕ್ಕೆ ಕುಪಿತಗೊಂಡ ಪ್ರಯಾಣಿಕರು ನಾವು ಟ್ಯಾಕ್ಸಿ ಸ್ವಚ್ಛಗೊಳಿಸುವುದಕ್ಕೆ ದುಡ್ಡು ಕೊಡಲ್ಲ ಎಂದು ಹೇಳಿ ನನ್ನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. You f.....g Indians deserve this ಎಂದು ಅವ್ಯಾಚ ಪದಗಳನ್ನು ಬಳಸಿ ನನ್ನನ್ನು ನಿಂದಿಸಿದ್ದಾರೆ ಎಂದು ರೋಯಲ್ ಹೋಬರ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಂಗ್ ದೂರಿದ್ದಾರೆ.

ADVERTISEMENT

ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಇಬ್ಬರು ಪ್ರಯಾಣಿಕರ ಮೇಲೆ ಪ್ರಕರಣ ದಾಖಲಿಸಿದ್ದು, ಜೂನ್ 26ರಂದು ಹೋಬರ್ಟ್ ಮೆಜಿಸ್ಟ್ರೇಟ್ ಕೋರ್ಟ್‍ಗೆ ಹಾಜರಾಗುವಂತೆ ಅವರಿಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾಕಿ ಇಯಾನ್ ವಿಷ್- ವಿಲ್ಸನ್ ಹೇಳಿದ್ದಾರೆ.

ಪೊಲೀಸ್ ಅಧಿಕಾರಿ ಹೇಳಿದ್ದೇನು?
ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅಸ್ವಸ್ಥರಾದಾಗ, ತಮ್ಮ ಟ್ಯಾಕ್ಸಿಯಿಂದ ಇಳಿಯುವಂತೆ ಸಿಂಗ್ ಹೇಳಿದ್ದಾರೆ. ಅದಲ್ಲದೆ ಟ್ಯಾಕ್ಸಿಯ ಬಾಡಿಗೆ ವಿಷಯದಲ್ಲಿ ಚಾಲಕ ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ  ಪ್ರಯಾಣಿಕರು ಸಿಂಗ್ ಮೇಲೆ ಹಲ್ಲೆ ನಡೆಸಿ ವಾಹನಕ್ಕೂ ಹಾನಿಯನ್ನುಂಟು ಮಾಡಿದ್ದಾರೆ.

ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ. ಆದರೆ ಇದು ಜನಾಂಗೀಯ ದ್ವೇಷದಿಂದ ಆದ ಜಗಳದಂತೆ ಕಾಣುತ್ತಿಲ್ಲ ಎಂದು ವಿಲ್ಸನ್ ಹೇಳಿದ್ದಾರೆ.

ಕಳೆದ ಒಂದು ವರ್ಷದೊಳಗೆ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಡೆದ ಹಲ್ಲೆ ಪ್ರಕರಣಗಳಲ್ಲಿ ಮೂರನೇ ಪ್ರಕರಣವಾಗಿದೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.