ADVERTISEMENT

ಇಂಡೊನೇಷ್ಯಾದಲ್ಲಿ ಭೂಕಂಪ; ಇಬ್ಬರ ಸಾವು

ಏಜೆನ್ಸೀಸ್
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST

ಜಕಾರ್ತ: ಇಂಡೊನೇಷ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸಂಭವಿಸಿದ 6.5 ತೀವ್ರತೆಯ ಭೂಕಂಪದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕರಾವಳಿ ಪಟ್ಟಣ ಸಿಪಾತುಜದ ಹೊರಭಾಗದ ದ್ವೀಪದಲ್ಲಿ ಶುಕ್ರವಾರ ಭೂಕಂಪನ ಉಂಟಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ ತಿಳಿಸಿದೆ.

ಸಿಯಾಮಿಸ್‌ನ 62 ವರ್ಷದ ಪುರುಷ ಮತ್ತು ಪೆಕಲಾಂಗನ್‌ ನಗರದ 80 ವರ್ಷದ ವೃದ್ಧೆ ಕಟ್ಟಡದ ಅಡಿಯಲ್ಲಿ ಸಿಲುಕಿ  ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಸಂಸ್ಥೆ ವಕ್ತಾರರಾದ ಸುಟೊಪೊ ಪುರ್ವೊ ನುಗ್ರೊಹೊ ತಿಳಿಸಿದ್ದಾರೆ.

‘ಹಲವು ಆಸ್ಪತ್ರೆಗಳೂ ಭೂಕಂಪದಿಂದಾಗಿ ಹಾನಿಗೊಳಗಾಗಿದ್ದು ರೋಗಿಗಳನ್ನು ತಾತ್ಕಾಲಿಕ ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದೆ. ನ್ಯುಮಸ್‌ನ ಒಂದು ಆಸ್ಪತ್ರೆಯ ಛಾವಣಿ ಹಾನಿಗೊಳಗಾಗಿದೆ’ ಎಂದು ನುಗ್ರೊಹೊ ತಿಳಿಸಿದ್ದಾರೆ.

ADVERTISEMENT

ಪೂರ್ವ ಮತ್ತು ಕೇಂದ್ರ ಜಾವಾದ ಸುಮಾರು 100 ಮನೆಗಳು ಹಾನಿಗೊಳಗಾಗಿವೆ. ಅಲ್ಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಹಾನಿಯ ಪ್ರಮಾಣವನ್ನು ಇನ್ನಷ್ಟೇ ಅಂದಾಜಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.