ADVERTISEMENT

ಇಂದು ಟ್ರಂಪ್‌ ಪ್ರಮಾಣ ವಚನ

ಪಿಟಿಐ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಪ್ಯಾರಿಸ್‌ನ ಗ್ರಿವಾ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲು ತಯಾರಿಸಿರುವ ಟ್ರಂಪ್‌ ಅವರ  ಮೇಣ ಪ್ರತಿಮೆಗೆ ಕಲಾವಿದ ಅಂತಿಮ ಸ್ಪರ್ಶ ನೀಡುತ್ತಿರುವುದು  –ಎಎಫ್‌ಪಿ ಚಿತ್ರ
ಪ್ಯಾರಿಸ್‌ನ ಗ್ರಿವಾ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲು ತಯಾರಿಸಿರುವ ಟ್ರಂಪ್‌ ಅವರ ಮೇಣ ಪ್ರತಿಮೆಗೆ ಕಲಾವಿದ ಅಂತಿಮ ಸ್ಪರ್ಶ ನೀಡುತ್ತಿರುವುದು –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌ : ಡೊನಾಲ್ಡ್‌ ಟ್ರಂಪ್‌ ಅವರು ಶುಕ್ರವಾರ ಮಧ್ಯಾಹ್ನ ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನ 12ಕ್ಕೆ (ಭಾರತೀಯ ಕಾಲಮಾನ – ಶನಿವಾರ ಬೆಳಿಗ್ಗೆ 10.30 ಗಂಟೆ) ಟ್ರಂಪ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಬಿಲ್‌ ಕ್ಲಿಂಟನ್‌, ಬಿಲ್ಲಿ ಕಾರ್ಟರ್‌ ಮತ್ತು ಜಾರ್ಜ್‌ ಬುಷ್‌ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭದ ವಿವರ
* ಪದಗ್ರಹಣ ಸಮಾರಂಭ ಗುರುವಾರದಿಂದ  ಶನಿವಾರದವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುವವು.

* ಶುಕ್ರವಾರ  ಬೆಳಿಗ್ಗೆ 8ಕ್ಕೆ (ಭಾರತೀಯ ಕಾಲಮಾನ ಸಂಜೆ 6.30) ನಿಯೋಜಿತ ಅಧ್ಯಕ್ಷ ಟ್ರಂಪ್‌  ಒಬಾಮ ಅವರೊಂದಿಗೆ ಕಾಫಿ ಸೇವನೆ ಮಾಡುವರು.

ADVERTISEMENT

* 10 ಗಂಟೆ – ಅಮೆರಿಕದ ಕ್ಯಾಪಿಟೋಲ್‌ ಭವನದಲ್ಲಿ ಪ್ರಮಾಣವಚನ ಸಮಾರಂಭ  ಆರಂಭವಾಗುವುದು.

* ಮಧ್ಯಾಹ್ನ 12ಗಂಟೆಗೆ ಪ್ರಮಾಣವಚನ ಸ್ವೀಕಾರ.

* 1.30ಕ್ಕೆ – ಕುಟುಂಬದವರೊಂದಿಗೆ ಶ್ವೇತ ಭವನದವರೆಗೆ ಮೆರವಣಿಗೆ.

* ಸಂಜೆ 5.30ಕ್ಕೆ – ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಗೌರವ ಸಲ್ಲಿಸುವ  ಕಾರ್ಯಕ್ರಮಗಳು.

ಸಮಾರಂಭದ ವೆಚ್ಚ
ಅಧಿಕಾರಿಗಳ ಪ್ರಕಾರ ಮೂರು ದಿನಗಳ ವರ್ಣರಂಜಿತ ಕಾರ್ಯಕ್ರಮಗಳಿಗೆ ಒಟ್ಟು ಸುಮಾರು 200 ದಶಲಕ್ಷ ಡಾಲರ್‌ ( ಸುಮಾರು ₹ 1,360 ಕೋಟಿ) ವೆಚ್ಚವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.