ADVERTISEMENT

‘ಇರಾನ್‌ ವಿರುದ್ಧ ನಿರ್ಬಂಧ’: ಎಚ್ಚರಿಕೆ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಎಚ್ಚರಿಕೆ

ಏಜೆನ್ಸೀಸ್
Published 22 ಮೇ 2018, 19:54 IST
Last Updated 22 ಮೇ 2018, 19:54 IST
ಮೈಕ್‌ ಪಾಂಪಿಯೊ
ಮೈಕ್‌ ಪಾಂಪಿಯೊ   

ವಾಷಿಂಗ್ಟನ್‌ (ಎಎಫ್‌ಪಿ): ಅಣು ಒಪ್ಪಂದದಿಂದ ಹಿಂದೆ ಸರಿದ ಬಳಿಕ ಇರಾನ್ ವಿರುದ್ಧ ಗುಡುಗಿರುವ ಅಮೆರಿಕ, ಇತಿಹಾಸದಲ್ಲಿಯೇ ಕೇಳಿರದಂತಹ ಪ್ರಬಲ ಆರ್ಥಿಕ ನಿರ್ಬಂಧ ಹೇರುವುದಾಗಿ ಎಚ್ಚರಿಕೆ ನೀಡಿದೆ.

ಅಲ್ಲದೇ, ಇರಾನ್‌ ಜತೆಗೆ ವ್ಯವಹಾರ ಮುಂದುವರಿಸುವ ಯುರೋಪ್‌ ಕಂಪನಿಗಳ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

ಹೆರಿಟೇಜ್‌ ಫೌಂಡೇಷನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಮೊದಲು ಅನುಭವಿಸಿದಂತಹ ಆರ್ಥಿಕ ನಿರ್ಬಂಧಗಳನ್ನು ಇರಾನ್‌ ಮೇಲೆ ಹೇರಲು ಹಿಂಜರಿಯುವುದಿಲ್ಲ. ನಾವು ಇಂತಹ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಇರಾನ್‌ಗೂ ಯಾವುದೇ ಸಂಶಯ ಇದ್ದಂತೆ ಇಲ್ಲ’ ಎಂದರು.

ADVERTISEMENT

ಅಮೆರಿಕದ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ, ‘ಯಾವುದೇ ರೀತಿಯ ಬೆದರಿಕೆಗೆ ಇರಾನ್‌ ಬಗ್ಗುವುದಿಲ್ಲ. ಇಂತಹ ನೂರಾರು ಹೇಳಿಕೆಗಳನ್ನು ಇರಾನ್‌ ಜನರು ಕೇಳಿಸಿಕೊಂಡಿದ್ದು, ಈಗ ಇಂಥವುಗಳಿಗೆ ಕಿವಿಗೊಡುವುದಿಲ್ಲ. 2003ರಲ್ಲಿ ಇರಾಕ್‌ ಮೇಲೆ ದಾಳಿ ನಡೆಸುವ ಮುನ್ನ ಜಾರ್ಜ್‌ ಡಬ್ಲ್ಯು ಬುಷ್‌ ಹೇಳಿದ್ದ ಮಾತುಗಳಂತೆಯೇ ಪಾಂಪಿಯೊ ಹೇಳಿಕೆಗಳಿವೆ’ ಎಂದೂ ರೌಹಾನಿ ಹೇಳಿದ್ದಾರೆ.

ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಪಾಂಪಿಯೊ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.