ADVERTISEMENT

ಈಜಿಪ್ಟ್‌ ದಾಳಿ: 28 ಬಲಿ

ಪಿಟಿಐ
Published 26 ಮೇ 2017, 19:30 IST
Last Updated 26 ಮೇ 2017, 19:30 IST

ಕೈರೊ: ದಕ್ಷಿಣ ಈಜಿಪ್ಟ್‌ನಲ್ಲಿ ಕ್ರಿಶ್ಚಿಯನ್ನರಿದ್ದ ಬಸ್ಸೊಂದರ ಮೇಲೆ ಶುಕ್ರವಾರ ದಾಳಿ ನಡೆಸಿರುವ ಮುಸುಕುಧಾರಿಗಳ ಗುಂಪು, 28 ಜನರನ್ನು ಕೊಂದು, 25 ಮಂದಿಯನ್ನು ಗಾಯಗೊಳಿಸಿದೆ. ಸಂತ್ರಸ್ತರಲ್ಲಿ ಹೆಚ್ಚಿನವರು ಮಕ್ಕಳು.

ಸೇನಾ ಸಮವಸ್ತ್ರ ಧರಿಸಿದ್ದ ಬಂದೂಕುಧಾರಿಗಳು ಮೂರು ವಾಹನಗಳಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ. ಘಟನೆ ನಡೆದ ಸ್ಥಳ ಕೈರೊದಿಂದ 250 ಕಿ.ಮೀ ದೂರದಲ್ಲಿದೆ. 

ಎರಡು ತಿಂಗಳಿನಿಂದೀಚೆಗೆ ದೇಶದಲ್ಲಿ ಕ್ರಿಶ್ಚಿಯನ್ನರ ಮೇಲೆ ನಡೆದ ಎರಡನೇ ಪ್ರಮುಖ ದಾಳಿ ಇದಾಗಿದೆ. ಯಾವ ಸಂಘಟನೆಯೂ ಘಟನೆಯ ಹೊಣೆ ಹೊತ್ತಿಲ್ಲ.

ADVERTISEMENT

ಈಜಿಪ್ಟ್‌ನ ಜನಸಂಖ್ಯೆಯಲ್ಲಿ ಶೇ 10ರಷ್ಟಿರುವ ಕ್ರಿಶ್ಚಿಯನ್ನರ ಮೇಲೆ ಇತ್ತೀಚಿನ ತಿಂಗಳುಗಳಲ್ಲಿ ಸಾಕಷ್ಟು ದಾಳಿಗಳು ನಡೆದಿದ್ದು, ಐ.ಎಸ್‌ ಉಗ್ರ ಸಂಘಟನೆ ಅವುಗಳ ಹೊಣೆಯನ್ನು ಹೊತ್ತುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.