ADVERTISEMENT

ಉಗ್ರರ ದಾಳಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2016, 19:30 IST
Last Updated 25 ಡಿಸೆಂಬರ್ 2016, 19:30 IST
ಉಗ್ರರ ದಾಳಿ
ಉಗ್ರರ ದಾಳಿ   

ಐಎಸ್‌ ಮತ್ತು ಅಲ್‌ಕೈದಾ ಉಗ್ರರ ದಾಳಿ
ಜನವರಿ 15

ಪಶ್ಚಿಮ ಆಫ್ರಿಕಾದ ದೇಶ ಬುರ್ಕಿನ ಫಾಸೊದ ಔಗಾಡೌದಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್‌ ಮೇಲೆ ದಾಳಿ ನಡೆಸಿದ ಅಲ್‌ಕೈದಾ ಉಗ್ರರು 22 ಮಂದಿಯನ್ನು ಹತ್ಯೆ ಮಾಡಿದರು. ಮೂವರು ಉಗ್ರರನ್ನು ಕೊಂದು 126 ಒತ್ತೆಯಾಳುಗಳನ್ನು ರಕ್ಷಿಸಲಾಯಿತು.

ಜನವರಿ 30: ನೈಜೀರಿಯಾದ ಮೈದುಗುರಿಯ ಹಳ್ಳಿಯ ಮೇಲೆ ಬೊಕೊ ಹರಮ್ ಉಗ್ರರ ದಾಳಿ. ಕನಿಷ್ಠ 65 ಮಂದಿ ಸಾವು. 136 ಜನರಿಗೆ ಗಾಯ.

ಫೆಬ್ರುವರಿ 12: ಇರಾಕ್‌ನ ಮೋಸುಲ್‌ನಲ್ಲಿರುವ ಜಗತ್ತಿನ ಅತಿ ಪ್ರಾಚೀನ ಕ್ರೈಸ್ತ ಮಂದಿರಗಳಲ್ಲಿ ಒಂದಾದ, 1400 ವರ್ಷ ಇತಿಹಾಸವುಳ್ಳ ಸೇಂಟ್‌ ಎಲಿಜಾಹ್‌ವನ್ನು ಧ್ವಂಸಗೊಳಿಸಿದ ಐಎಸ್‌ ಉಗ್ರರು.

ಫೆ. 21: ಸಿರಿಯಾದ ಹೊಮ್ಸ್‌ ಮತ್ತು ಡಮಾಸ್ಕಸ್‌ ಮೇಲೆ ಐಎಸ್‌ ಉಗ್ರರ ದಾಳಿಯಲ್ಲಿ 140 ಮಂದಿ ಬಲಿ

***
ಮಾರ್ಚ್‌ 22

ಪಶ್ಚಿಮ ಆಫ್ರಿಕಾದ ದೇಶ ಬುರ್ಕಿನ ಫಾಸೊದ ಔಗಾಡೌದಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್‌ ಮೇಲೆ ದಾಳಿ ನಡೆಸಿದ ಅಲ್‌ಕೈದಾ ಉಗ್ರರು 22 ಮಂದಿಯನ್ನು ಹತ್ಯೆ ಮಾಡಿದರು. ಮೂವರು ಉಗ್ರರನ್ನು ಕೊಂದು 126 ಒತ್ತೆಯಾಳುಗಳನ್ನು ರಕ್ಷಿಸಲಾಯಿತು.

ಜನವರಿ 30: ನೈಜೀರಿಯಾದ ಮೈದುಗುರಿಯ ಹಳ್ಳಿಯ ಮೇಲೆ ಬೊಕೊ ಹರಮ್ ಉಗ್ರರ ದಾಳಿ. ಕನಿಷ್ಠ 65 ಮಂದಿ ಸಾವು. 136 ಜನರಿಗೆ ಗಾಯ.

ಫೆಬ್ರುವರಿ 12: ಇರಾಕ್‌ನ ಮೋಸುಲ್‌ನಲ್ಲಿರುವ ಜಗತ್ತಿನ ಅತಿ ಪ್ರಾಚೀನ ಕ್ರೈಸ್ತ ಮಂದಿರಗಳಲ್ಲಿ ಒಂದಾದ, 1400 ವರ್ಷ ಇತಿಹಾಸವುಳ್ಳ ಸೇಂಟ್‌ ಎಲಿಜಾಹ್‌ವನ್ನು ಧ್ವಂಸಗೊಳಿಸಿದ ಐಎಸ್‌ ಉಗ್ರರು.

ಫೆ. 21: ಸಿರಿಯಾದ ಹೊಮ್ಸ್‌ ಮತ್ತು ಡಮಾಸ್ಕಸ್‌ ಮೇಲೆ ಐಎಸ್‌ ಉಗ್ರರ ದಾಳಿಯಲ್ಲಿ 140 ಮಂದಿ ಬಲಿ ಬ್ರಸಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೊ ನಿಲ್ದಾಣಗಳ ಮೇಲೆ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 32 ಮಂದಿ ಮೃತಪಟ್ಟು, 260 ಜನರು ಗಾಯಗೊಂಡರು.

ಮಾ. 27: ಪಾಕಿಸ್ತಾನದ ಲಾಹೋರ್‌ನಲ್ಲಿ ಕ್ರೈಸ್ತರನ್ನು ಗುರಿಯಾಗಿರಿಸಿಕೊಂಡು ಸುನ್ನಿ ಇಸ್ಲಾಮಿಕ್‌ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 75 ಬಲಿ, ಸುಮಾರು 340 ಜನರಿಗೆ ಗಾಯ.

ಜೂನ್ 12: ಅಮೆರಿಕದ ಒರ್ಲಾಂಡೊದಲ್ಲಿ ಸಲಿಂಗಿಗಳ ನೈಟ್‌ಕ್ಲಬ್ ಮೇಲೆ ದಾಳಿ ನಡೆಸಿದ ಐಎಸ್‌ ಬಂದೂಕುಧಾರಿಯಿಂದ 49 ಜನರ ಹತ್ಯೆ.

ಜೂ. 28: ಇಸ್ತಾಂಬುಲ್‌ನ ಅಟಟುರ್ಕ್‌ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ಮತ್ತು ಬಂದೂಕು ದಾಳಿಗೆ 42 ಮಂದಿ ಬಲಿ. 200ಕ್ಕೂ ಹೆಚ್ಚು ಮಂದಿಗೆ ಗಾಯ.

ಜುಲೈ 1: ಬಾಂಗ್ಲಾದೇಶದ ಢಾಕಾದಲ್ಲಿನ ಕೆಫೆಯೊಂದರ ಮೇಲೆ ಇಸ್ಲಾಮಿಕ್ ಸ್ಟೇಟ್‌ ಉಗ್ರರ ದಾಳಿ. 20 ಒತ್ತೆಯಾಳುಗಳು ಮತ್ತು ಇಬ್ಬರು ಪೊಲೀಸರ ಹತ್ಯೆ

ಜು. 2: ಇರಾಕ್‌ನ ಬಾಗ್ದಾದ್‌ನಲ್ಲಿ ಲಾರಿಯಲ್ಲಿ ಬಾಂಬ್ ಸ್ಫೋಟ, 125 ಸಾವು. ಸುಮಾರು 150 ಜನರಿಗೆ ಗಾಯ. ದಾಳಿ ಹೊಣೆ ಹೊತ್ತ ಐಎಸ್.

ಜು. 23: ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಪ್ರತಿಭಟನಾ ಮೆರವಣಿಗೆ ಮೇಲೆ ಆತ್ಮಾಹುತಿ ಬಾಂಬ್ ದಾಳಿಗೆ 80 ಸಾವು.

ಅಕ್ಟೋಬರ್‌ 25: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಪೊಲೀಸ್ ತರಬೇತಿ ಅಕಾಡೆಮಿ ಮೇಲೆ ಐಎಸ್‌ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 61 ಸಾವು. 117 ಮಂದಿಗೆ ಗಾಯ.
 
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT