ADVERTISEMENT

‘ಏಪ್ರಿಲ್‌ ಸಂಕಷ್ಟ’ದಿಂದ ಪಾರಾದ ಷರೀಫ್‌ !

ಪಿಟಿಐ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST

ಇಸ್ಲಾಮಾಬಾದ್‌: ಪಾಕಿಸ್ತಾನದ ಬಹುತೇಕ ಪ್ರಧಾನಿಗಳಿಗೆ ಏಪ್ರಿಲ್‌ ತಿಂಗಳು ಸಂಕಷ್ಟ ತಂದಿದೆ.

ಇದೇ ತಿಂಗಳಲ್ಲಿಯೇ  ಸಂಕಷ್ಟ ಎದುರಾಗಿದ್ದು, ಕೆಲವರು ಅಧಿಕಾರ ಕಳೆದುಕೊಂಡರೆ, ಇನ್ನು ಕೆಲವರು ಜೀವಾವಧಿ, ಗಲ್ಲು ಶಿಕ್ಷೆಗೆ ಒಳಗಾಗಿದ್ದಾರೆ.

ಆಸಕ್ತಿದಾಯಕ ವಿಚಾರವೆಂದರೆ ಸುಪ್ರೀಂಕೋರ್ಟ್‌ ಅತಿ ಹೆಚ್ಚು ಬಾರಿ ಏಪ್ರಿಲ್‌ ತಿಂಗಳಲ್ಲಿಯೇ ತೀರ್ಪು ಪ್ರಕಟಿಸಿದೆ. ಈ ಹಿಂದೆ ಷರೀಫ್‌ ಅವರಿಗೆ 2000ನೇ ಇಸ್ವಿಯ ಏಪ್ರಿಲ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ADVERTISEMENT

ಅದಕ್ಕೂ ಮುನ್ನ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಷರೀಫ್‌ ಸರ್ಕಾರವನ್ನು 1993ರ ಏಪ್ರಿಲ್‌ನಲ್ಲಿ ಅಂದಿನ ಅಧ್ಯಕ್ಷ ಗುಲಾಂ ಇಷಕ್‌ ಖಾನ್‌ ಅವರು ವಜಾಗೊಳಿಸಿದ್ದರು.

ನಂತರ 2000ನೇ ಇಸ್ವಿಯ ಏಪ್ರಿಲ್‌ 6ರಂದು ಷರೀಫ್‌ ಅವರಿಗೆ ವಿಮಾನ ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು. ಅಂದಿನ ಸೇನಾ ಮುಖ್ಯಸ್ಥ ಜನರಲ್‌ ಪರ್ವೇಜ್‌ ಮುಷರಫ್‌ ಅವರ ಪ್ರಯಾಣಿಸುತ್ತಿದ್ದ ವಿಮಾನ ಕೆಳಗಿಳಿಸದಂತೆ ಪ್ರಧಾನಿ ನವಾಜ್‌ ಷರೀಫ್ ಆದೇಶಿಸಿದ್ದರು ಎಂದು ಆರೋಪಿಸಲಾಗಿತ್ತು.
ಇನ್ನು ಪಾಕಿಸ್ತಾನದ ಇತರ ಪ್ರಧಾನಿಗಳೂ ಏಪ್ರಿಲ್‌ ತಿಂಗಳಲ್ಲಿ ಸಂಕಷ್ಟಗಳನ್ನು ಅನುಭವಿಸಿದ್ದಾರೆ.

ಪ್ರಮುಖ ರಾಜಕೀಯ ನಾಯಕರೊಬ್ಬರನ್ನು ಹತ್ಯೆ ಮಾಡಿದ ಆರೋಪಕ್ಕಾಗಿ  ಮಾಜಿ ಪ್ರಧಾನಿ ಜುಲ್ಫಿಕರ್‌ ಆಲಿ ಭುಟ್ಟೊ ಅವರನ್ನು 1979ರ ಏಪ್ರಿಲ್‌ 4ರಂದು ಗಲ್ಲಿಗೇರಿಸಲಾಗಿತ್ತು.

ಆಸಿಫ್‌ ಆಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರದ ಪ್ರಕರಣವನ್ನು ಮರುಪರಿಶೀಲಿಸುವಂತೆ ಕೋರಿ ಸ್ವಿಸ್‌ ಬ್ಯಾಂಕಿಗೆ ಪತ್ರ ಬರೆದ ಆರೋಪದಲ್ಲಿ 2012ರ ಏಪ್ರಿಲ್‌ 26ರಂದು ಪ್ರಧಾನಿ ಯೂಸುಫ್‌ ರಝ ಗಿಲಾನಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಅದೇ ದಿನ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.