ADVERTISEMENT

ಐಎಸ್‌ಐ ಮಾಜಿ ಮುಖ್ಯಸ್ಥನಿಗೆ ಪಾಕ್‌ ಸೇನೆ ಸಮನ್ಸ್‌

ಭಾರತೀಯ ಲೇಖಕನ ಕೃತಿಗೆ ಸಹಲೇಖಕನಾಗಿದ್ದಕ್ಕೆ ಆಕ್ರೋಶ

ಪಿಟಿಐ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಇಸ್ಲಾಮಾಬಾದ್‌: ಭಾರತೀಯ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಎ.ಎಸ್. ದುಲತ್‌ ಅವರ ಕೃತಿಗೆ ಸಹಲೇಖಕರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನ ಸೇನೆ, ಐಎಸ್‌ಐ ಮಾಜಿ ಮುಖ್ಯಸ್ಥ ಅಸಾದ್‌ ದುರ‍್ರಾನಿ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

‘ಭಾರತದ ಅಧಿಕಾರಿಯೊಂದಿಗೆ ಅಭಿಪ್ರಾಯ ಹಂಚಿಕೊಂಡಿರುವುದು ಸೇನೆಯ ನೀತಿಸಂಹಿತೆ ಉಲ್ಲಂಘಿಸಿದಂತೆ’ ಎಂದು ಹೇಳಿರುವ ಪಾಕಿಸ್ತಾನ ಸೇನೆ, ಈ ಬಗ್ಗೆ ದುರ‍್ರಾನಿ ಅವರ ವಿವರಣೆ ಕೇಳಿದ್ದು, ಮೇ 28ರಂದು ಸೇನಾ ಕೇಂದ್ರ ಕಚೇರಿಗೆ ಬರಲು ಹೇಳಿದೆ.

ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಆಗಿರುವ ದುರ್ರಾನಿ, 1990ರಿಂದ 1992ರವರೆಗೆ ಪಾಕಿಸ್ತಾನ ಐಎಸ್‌ಐ ಮುಖ್ಯಸ್ಥರಾಗಿದ್ದರು. ಅವರು, ದುಲತ್‌ ಬರೆದಿರುವ ‘ದಿ ಸ್ಪೈ ಕ್ರಾನಿಕಲ್ಸ್‌: ರಾ, ಐಎಸ್‌ಐ ಅಂಡ್‌ ದಿ ಇಲುಷನ್‌ ಆಫ್‌ ಪೀಸ್‌’ ಕೃತಿಯ ಸಹಲೇಖಕರಾಗಿದ್ದಾರೆ. ಕಳೆದ ಬುಧವಾರ ಈ ಕೃತಿ ಬಿಡುಗಡೆಯಾಗಿದೆ.

ADVERTISEMENT

‘ಸೇನಾ ನೀತಿಸಂಹಿತೆಯು ಎಲ್ಲ ಹಾಲಿ ಮತ್ತು ನಿವೃತ್ತ ಅಧಿಕಾರಿಗಳಿಗೂ ಅನ್ವಯಿಸುತ್ತದೆ’ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ದುರ‍್ರಾನಿ ಅವರನ್ನು ಸೇನಾ ಮುಖ್ಯಸ್ಥರ ಮುಖ್ಯ ಕಚೇರಿಗೆ ಕರೆಸಿಕೊಂಡು ವಿವರಣೆ ಕೇಳಲಾಗುವುದು ಎಂದು ಸೇನಾ ವಕ್ತಾರ ಜನರಲ್‌ ಆಸಿಫ್‌ ಘಫೂರ್ ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.