ADVERTISEMENT

ಐ.ಎಸ್‌.ಗೆ ಎಸ್‌ಯುವಿ:ತನಿಖೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

ವಾಷಿಂಗ್ಟನ್‌ (ಪಿಟಿಐ): ಐ.ಎಸ್‌. ಭಾರಿ ಸಂಖ್ಯೆಯಲ್ಲಿ ಟೊಯೊಟಾ ಎಸ್‌ಯುವಿ ವಾಹನಗಳನ್ನು ಹೊಂದಿದ ಬಗ್ಗೆ ತನಿಖೆ ಆರಂಭಿಸಿರುವ ಅಮೆರಿಕ, ಜಪಾನ್‌ನ ಆಟೊಮೊಬೈಲ್‌ ದಿಗ್ಗಜ ಟೊಯೊಟಾದಿಂದ ಮಾಹಿತಿ ಕೇಳಿದ್ದು ತನಿಖೆಗೆ ಸಹಕರಿಸುವುದಾಗಿ ಅದು ಹೇಳಿದೆ.

ಅಮೆರಿಕದ ಹಣಕಾಸು ಇಲಾಖೆಯ ಭಯೋತ್ಪಾದಕ ಧನವಿನಿಯೋಗ ವಿಭಾಗದ ನೇತೃತ್ವದಲ್ಲಿ ತನಿಖೆ ನಡೆದಿದೆ. 

ಟೊಯೊಟಾದ ಹಳೆಯ ಮತ್ತು ಹೊಸ ಮಾದರಿಯ ಎಸ್‌ಯುವಿಗಳನ್ನು ಉಗ್ರರು ಬಳಸುತ್ತಿರುವುದು ವಿಡಿಯೊಗಳಲ್ಲಿ ಕಂಡುಬಂದಿದೆ. ಅಲ್ಲದೆ ಐ.ಎಸ್‌. ಸಂಘಟನೆ ನೂರಾರು ಎಸ್‌ಯುವಿಗಳನ್ನು ಖರೀದಿಸಿದ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.