ADVERTISEMENT

ಐದು ಲಕ್ಷ ಪೌಂಡ್‌ನ ಬಾಜಿ..

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಲಂಡನ್ (ಪಿಟಿಐ): ಬ್ರಿಟನ್ ರಾಜಕುಮಾರ ವಿಲಿಯಮ್‌ನ ಪತ್ನಿ ಕೇಟ್ ಮಿಡಲ್ಟನ್ ಒಂದೊಮ್ಮೆ ಹೆಣ್ಣುಮಗುವಿಗೆ ಜನ್ಮವಿತ್ತು, ಆ ಮಗುವಿಗೆ ‘ಅಲೈಸ್’ ಎಂದು ಹೆಸರಿಟ್ಟಲ್ಲಿ ಬುಕ್ಕಿಗಳು 5 ಲಕ್ಷ ಪೌಂಡ್ (ಸು ₨ 4.6 ಕೋಟಿ) ತೆರಬೇಕಾಗುತ್ತದೆ.

ವಿಲಿಯಮ್ ಮತ್ತು ಕೇಟ್ ದಂಪತಿಗೆ ಜನಿಸುವ ಎರಡನೇ ಮಗು ಹೆಣ್ಣಾಗಿರುತ್ತದೆ ಮತ್ತು ಅದಕ್ಕೆ ಅಲೈಸ್ ಎಂದು ಹೆಸರಿಡಲಾಗುತ್ತದೆ ಎಂದು ಬ್ರಿಟನ್ ಜನತೆ ಬೆಟ್ಟಿಂಗ್ ಕಟ್ಟಿದ್ದಾರೆ. 

ಬೆಟ್ಟಿಂಗ್ ಕಟ್ಟಿದ ಹತ್ತು  ಮಂದಿಯಲ್ಲಿ ಒಂಬತ್ತು  ಮಂದಿ ಎರಡನೇ ಮಗು ಹೆಣ್ಣಾಗಿರುತ್ತದೆ ಎನ್ನುವುದರ ಪರವಾಗಿದ್ದಾರೆ.
ಜನಿಸಲಿರುವ ಮಗುವಿನ ಲಿಂಗದ ಬಗ್ಗೆ ದಂಪತಿಗಳಿಗೂ ಮಾಹಿತಿಯಿಲ್ಲ ಎಂದು ಇಲ್ಲಿನ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.