ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ) ಪಾಕಿಸ್ತಾನದ ಪರ ಇನ್ನುಮುಂದೆ ಅಟಾರ್ನಿ ಜನರಲ್ ಅಶ್ತಾರ್ ಔಸಫ್ ಅಲಿ ವಾದಿಸಲಿದ್ದಾರೆ.
ಮೇ 15ರ ವಿಚಾರಣೆ ವೇಳೆ ವಕೀಲ ಖವಾರ್ ಖುರೇಶಿ ಅವರು ವಾದ ಮಂಡಿಸಿದ ರೀತಿಯ ಬಗ್ಗೆ ಪಾಕಿಸ್ತಾನದ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಮಧ್ಯೆ ಜಾಧವ್ಗೆ ದೂತವಾಸ ಕಚೇರಿ ಸಂಪರ್ಕಕ್ಕೆ ಅವಕಾಶ ನೀಡುವ ಬಗ್ಗೆ ಐಸಿಜೆ ತನ್ನ ಆದೇಶದಲ್ಲಿ ಏನೂ ಹೇಳಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.