ADVERTISEMENT

’ಒಂದು ಮಿಲಿಯನ್ ಕಪ್ಪುವರ್ಣೀಯರ ಜೀವಕ್ಕಿಂತ ಒಂದು ನಾಯಿಯ ಜೀವ ಮುಖ್ಯ’ ಹೇಳಿಕೆ ನೀಡಿದ ಅಗ್ನಿಶಾಮಕ ಸ್ವಯಂಸೇವಕ ಅಮಾನತು

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 14:46 IST
Last Updated 19 ಸೆಪ್ಟೆಂಬರ್ 2017, 14:46 IST
’ಒಂದು ಮಿಲಿಯನ್ ಕಪ್ಪುವರ್ಣೀಯರ ಜೀವಕ್ಕಿಂತ ಒಂದು ನಾಯಿಯ ಜೀವ ಮುಖ್ಯ’ ಹೇಳಿಕೆ ನೀಡಿದ ಅಗ್ನಿಶಾಮಕ ಸ್ವಯಂಸೇವಕ ಅಮಾನತು
’ಒಂದು ಮಿಲಿಯನ್ ಕಪ್ಪುವರ್ಣೀಯರ ಜೀವಕ್ಕಿಂತ ಒಂದು ನಾಯಿಯ ಜೀವ ಮುಖ್ಯ’ ಹೇಳಿಕೆ ನೀಡಿದ ಅಗ್ನಿಶಾಮಕ ಸ್ವಯಂಸೇವಕ ಅಮಾನತು   

ನ್ಯೂಯಾರ್ಕ್: ಎರಡು ದಿನಗಳ ಹಿಂದೆ  ಫೇಸ್‌ಬುಕ್‌ನಲ್ಲಿ ಕಪ್ಪು ವರ್ಣೀಯರನ್ನು ಹೀಗಳೆದು ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಅಗ್ನಿಶಾಮಕ ದಳ ಇಲಾಖೆಯ ಸ್ವಯಂ ಸೇವಕನನ್ನು ಮಂಗಳವಾರ ಅಮಾನತು ಮಾಡಲಾಗಿದೆ.

ಸ್ವಯಂಸೇವಕ ಟೈಲೇರ್ ರಾಯ್ಸನ್ ಫ್ರಾಂಕ್ಲಿನ್ ಪಟ್ಟಣ ನಿವಾಸಿ. ಇವರು ಕಟ್ಟಡದ ಬೆಂಕಿ ದುರಂತದಲ್ಲಿ ಕಪ್ಪು ವರ್ಣೀಯರು ಹಾಗೂ ನಾಯಿ ಈ ಎರಡಲ್ಲಿ ಯಾವುದನ್ನು ರಕ್ಷಿಸುವೆ ಎಂದು ಕೇಳಿದರೆ ನಾನು ನಾಯಿಯನ್ನು ರಕ್ಷಿಸುತ್ತೇನೆ ಎಂದು ಹೇಳುತ್ತೇನೆ. ಏಕೆಂದರೆ ‘ಒಂದು ನಾಯಿಯ ಜೀವ ಒಂದು ಮಿಲಿಯನ್ ಕಪ್ಪುವರ್ಣೀಯರ ಜೀವಕ್ಕಿಂತ ಮುಖ್ಯ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ಇವರ ಈ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಫೇಸ್‌ಬುಕ್‌ ಖಾತೆಯಿಂದ ಹೇಳಿಕೆಯನ್ನು ತೆಗೆದುಹಾಕಿದ್ದಾರೆ. ಆದರೆ ಸ್ಕ್ರೀನ್‌ ಶಾಟ್‌ ಎಲ್ಲರಿಗೂ ಲಭ್ಯವಾಗಿದೆ.

ADVERTISEMENT

ಅಧಿಕಾರಿಗಳಿಗೆ ಹೇಳಿಕೆಯ ಪೋಸ್ಟ್‌ ದೊರೆತ ಕೂಡಲೇ ಅನಿರ್ದಿಷ್ಟವಾಗಿ ವೃತ್ತಿಯಿಂದ ಅಮಾನತು ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ಡಬ್ಲ್ಯೂಎಚ್‌ಐಒ ಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.