ADVERTISEMENT

ಕರಾಚಿಯಲ್ಲಿ ಪತ್ತೆಯಾದ ಮೌಲ್ವಿಗಳು ನಾಳೆ ಭಾರತಕ್ಕೆ ವಾಪಸ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 9:07 IST
Last Updated 19 ಮಾರ್ಚ್ 2017, 9:07 IST
ಕರಾಚಿಯಲ್ಲಿ ಪತ್ತೆಯಾದ ಮೌಲ್ವಿಗಳು ನಾಳೆ ಭಾರತಕ್ಕೆ ವಾಪಸ್
ಕರಾಚಿಯಲ್ಲಿ ಪತ್ತೆಯಾದ ಮೌಲ್ವಿಗಳು ನಾಳೆ ಭಾರತಕ್ಕೆ ವಾಪಸ್   

ಕರಾಚಿ/ನವದೆಹಲಿ: ಸೋದರಿಯನ್ನು ಭೇಟಿ ಮಾಡಲು ಹೋಗಿ ನಾಪತ್ತೆಯಾಗಿದ್ದ ಭಾರತದ ಇಬ್ಬರು ಮೌಲ್ವಿಗಳು  ಪತ್ತೆಯಾಗಿದ್ದು, ಅವರಿಬ್ಬರೂ ನಾಳೆ ದೆಹಲಿಗೆ ತಲುಪಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್  ಟ್ವೀಟ್ ಮಾಡಿದ್ದಾರೆ.

‘ಇಬ್ಬರು ಮೌಲ್ವಿಗಳನ್ನು ಪತ್ತೆ ಮಾಡಿ ಕರಾಚಿಗೆ ಕಳುಹಿಸಿರುವುದನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ನಿನ್ನೆ ದೃಢಪಡಿಸಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಪಾಕಿಸ್ತಾನ ಪ್ರಧಾನಿಯವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರೊಂದಿಗೆ ಮಾತನಾಡಿದ ಬಳಿಕ ಈ ವಿಷಯ ದೃಢಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.