ADVERTISEMENT

ಕೀಟಗಳ ಬುದ್ಧಿಶಕ್ತಿಯ ‘ರೋಬೊಬೀ’

ಪಿಟಿಐ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಕೀಟಗಳ ಬುದ್ಧಿಶಕ್ತಿಯ ‘ರೋಬೊಬೀ’
ಕೀಟಗಳ ಬುದ್ಧಿಶಕ್ತಿಯ ‘ರೋಬೊಬೀ’   

ನ್ಯೂಯಾರ್ಕ್: ಕೀಟಗಳ ರೀತಿ ಆಲೋಚಿಸುವ ಹಾಗೂ ಅವುಗಳಂತೆ ಓಡಾಡಬಲ್ಲ ಅತಿಸಣ್ಣ ರೋಬೊಟ್‌ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸದ್ದಾರೆ. ಸಂಕೀರ್ಣ ವಾತಾವರಣದಲ್ಲಿ ಇವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲವು.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್‌ ಮೈಕ್ರೊಬಯೊಟಿಕ್ಸ್ ಲ್ಯಾಬೊರೇಟರಿ ಸಹಯೋಗದಲ್ಲಿ 80 ಮಿಲಿಗ್ರಾಂ ತೂಕದ ಹಾರುವ ರೋಬೊಟನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ‘ರೋಬೊಬೀ’ ಎಂದು ಹೆಸರಿಡಲಾಗಿದೆ. ಇದಕ್ಕಿರುವ ಒಂದೇ ನ್ಯೂನತೆ ಎಂದರೆ ಇಂಧನ ಪೂರೈಕೆ. ಹೀಗಾಗಿ ಹೊಸ ರೀತಿಯ ಶಕ್ತಿ ಮೂಲಕ್ಕಾಗಿ ಸಂಶೋಧನೆ ನಡೆಯುತ್ತಿದೆ.

‘ಹಾರಾಟದ ವೇಳೆ ಗಾಳಿಯ ಹೊಡೆತಕ್ಕಿ ಸಿಲುಕಿ ಅಥವಾ ವಸ್ತುಗಳಿಗೆ ತಗುಲಿ ಈ ಚಿಕ್ಕ ರೋಬೊಗಳು ತಮ್ಮ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಅಪಘಾತಗಳಿಂದ ಪಾರಾಗಲು ಮತ್ತು ಅಪಘಾತವಾದಾಗಲೂ ನಿಯಂತ್ರಣ ಸಾಧಿಸುವ ಸಾಮರ್ಥ್ಯ ಒದಗಿಸುವ ಸೆನ್ಸರ್‌ ಹಾಗೂ ಅಲ್ಗೊರಿದಮ್ಸ್‌ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿಲ್ವಿಯಾ ಫೆರಾರಿ ಹೇಳಿದ್ದಾರೆ.

ADVERTISEMENT

ಇದರ ಪಾದದಲ್ಲಿ ತೆಳುವಾದ ಕೂದಲಿನ ರೂಪದ ಕಾಂಟಾಕ್ಟ್ ಸೆನ್ಸರ್, ಏರ್‌ಫ್ಲೋ ಸೆನ್ಸರ್‌ ಅಳವಡಿಸಲಾಗಿದೆ. ಇದರ ಜತೆ ಮೈಕ್ರೊ ಕ್ಯಾಮರಾ, ಆಂಟೆನಾಗಳನ್ನು ಅಳವಡಿಸಿದ್ದು, ಇವು ರೋಬೊ ಜೊತೆ ಸಂವಹನಕ್ಕೆ ನೆರವಾಗುತ್ತವೆ. 17 ಮಿಲಿಮೀಟರ್ ಉದ್ದ ಹಾಗೂ 3 ಗ್ರಾಂ ತೂಕದ ನಾಲ್ಕು ಪಾದಗಳ ಹಾರ್ವರ್ಡ್ ಸಂಚಾರಿ ಮೈಕ್ರೊರೋಬೊಟ್ ಈಗಾಗಲೇ ಈ ತಂತ್ರಜ್ಞಾನದ ಲಾಭ ಪಡೆಯುತ್ತಿದೆ.

ವೈಶಿಷ್ಟ್ಯತೆ
ವೇಗ: ಸೆಕೆಂಡ್‌ಗೆ 0.44 ಮೀಟರ್‌

ತೂಕ: 80 ಮಿಲಿಗ್ರಾಂ

ಸ್ವರೂಪ: ಹಾರುವ ದುಂಬಿ

ವಿಶೇಷತೆ: ಸ್ವಯಂ ನಿಯಂತ್ರಣ

ಸಾಮರ್ಥ್ಯ: ಅಪಘಾತ ತಪ್ಪಿಸಿಕೊಳ್ಳುವ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.