ADVERTISEMENT

ಕೊನೆ ಕ್ಷಣದಲ್ಲಿ ತಪ್ಪಿದ ಗಲ್ಲು

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಲಾಹೋರ್‌ (ಪಿಟಿಐ): ಬುಧವಾರ ನೇಣಿಗೇರಬೇಕಿದ್ದ 43 ವರ್ಷದ ಪಾರ್ಶ್ವವಾಯು ಪೀಡಿತ ಕೈದಿಯ ಗಲ್ಲು ಶಿಕ್ಷೆಯನ್ನು ಲಾಹೋರ್‌ ಹೈಕೋರ್ಟ್‌ ಕೊನೆಯ ಕ್ಷಣದಲ್ಲಿ ತಡೆಹಿಡಿದಿದೆ.

‘ಪಾರ್ಶ್ವವಾಯು ಪೀಡಿತ ಕೈದಿಯನ್ನು ಗಲ್ಲಿಗೇರಿಸುವುದು ಕ್ರೂರ ಮತ್ತು ಅಸ್ವಾಭಾವಿಕ ಶಿಕ್ಷೆ’ ಎಂದಿರುವ ನ್ಯಾಯಮೂರ್ತಿ ಅಲಿಯ ನೀಲಮ್‌ ನೇತೃತ್ವದ ಪೀಠ,  ಮರಣದಂಡನೆ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ. 

ಕೈದಿ ಅಬ್ದುಲ್‌ ಬಾಸಿತ್‌ಗೆ 2009ರಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ನ್ಯಾಯಾಲಯ ಮಧ್ಯಪ್ರವೇಶ ಮಾಡದೆ  ಇದ್ದರೆ ಬುಧವಾರ ಆತನನ್ನು ನೇಣಿಗೇರಿಸಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.