ADVERTISEMENT

ಕ್ಷಿಪಣಿ ಪರೀಕ್ಷೆ ವಿಫಲ

ಪಿಟಿಐ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST

ವಾಷಿಂಗ್ಟನ್‌:  ಉತ್ತರ ಕೊರಿಯಾ ಭಾನುವಾರ ನಡೆಸಿದ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಾ ಹೇಳಿವೆ.
ದೇಶದ ಪೂರ್ವ ಭಾಗದಲ್ಲಿರುವ ಬಂದರು ನಗರ ಸಿನ್ಪೊದಲ್ಲಿ ಈ ಪರೀಕ್ಷೆ ನಡೆದಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಇಲಾಖೆ ಮತ್ತು ಯುಎಸ್‌ ಪೆಸಿಫಿಕ್‌ ಕಮಾಂಡ್‌ ಹೇಳಿದೆ.

‘ಉಡಾವಣೆಗೊಂಡ ಕೆಲವೇ ಕ್ಷಣದಲ್ಲಿ ಕ್ಷಿಪಣಿ ಸ್ಫೋಟಗೊಂಡಿದೆ. ಅದು ಯಾವ ರೀತಿಯ ಕ್ಷಿಪಣಿ ಮತ್ತು ಅದರ ಸಾಮರ್ಥ್ಯವೇನು ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗುವುದು’ ಎಂದು ಕಮಾಂಡ್‌ನ ವಕ್ತಾರ ಡೇವ್‌ ಬೆನ್ಹಮ್‌ ತಿಳಿಸಿದ್ದಾರೆ.

ಉತ್ತರ ಕೊರಿಯಾ ಈ ತಿಂಗಳ ಆರಂಭದಲ್ಲಿ ಇದೇ ಕೇಂದ್ರದಿಂದ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ನಿಗದಿತ ದೂರ ಕ್ರಮಿಸಿದ್ದ ಆ ಕ್ಷಿಪಣಿ ಜಪಾನ್‌ ಸಮುದ್ರದಲ್ಲಿ ಬಿದ್ದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.