ADVERTISEMENT

ಖಲೀದಾ ಜಿಯಾ ಜಾಮೀನು ಅವಧಿ ವಿಸ್ತರಣೆ

ಪಿಟಿಐ
Published 25 ಫೆಬ್ರುವರಿ 2018, 20:02 IST
Last Updated 25 ಫೆಬ್ರುವರಿ 2018, 20:02 IST

ಢಾಕಾ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ಸೋಮವಾರದವರೆಗೆ ಜಾಮೀನು ವಿಸ್ತರಣೆಯಾಗಿದೆ.

ಭ್ರಷ್ಟಾಚಾರ ಆರೋಪ ಹೊತ್ತಿದ್ದ ಜಿಯಾ ಅವರಿಗೆ ಇದೇ 8ರಂದು ಢಾಕಾ ವಿಶೇಷ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು.

ಜಿಯಾ ಪರ ವಕೀಲ ಮೌದದ್ ಅಹ್ಮದ್ ಅವರು ಜಾಮೀನು ವಿಸ್ತರಣೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಢಾಕಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಡಿ ಅಖ್ತರ್ಸುಝಾಮನ್, ಜಿಯಾ ಅವರ ಜಾಮೀನು ವಿಸ್ತರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.