ADVERTISEMENT

ಗರ್ಭಪಾತ: ಕ್ಷಮೆ ನೀಡೋಣ–ಪೋಪ್‌ ಫ್ರಾನ್ಸಿಸ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 14:46 IST
Last Updated 1 ಸೆಪ್ಟೆಂಬರ್ 2015, 14:46 IST

ವ್ಯಾಟಿಕನ್‌ಸಿಟಿ: ‘ಗರ್ಭಪಾತ ಮಾಡಿಸಿಕೊಂಡ ಮಹಿಳೆಯರನ್ನು ಈ ಪವಿತ್ರ  ವರ್ಷದಲ್ಲಿ ( 2015ರ ಡಿಸೆಂಬರ್‌ 8ರಿಂದ 2016ರ ನವೆಂಬರ್‌ 20ರವರೆಗೆ) ಕ್ಷಮಿಸಿ ಬಿಡಿ, ಇದಕ್ಕೆ ನೆರವು ನೀಡಿದ ವೈದ್ಯರಿಗೂ ಕ್ಷಮಾದಾನ  ನೀಡಿ’ ಎಂದು ಪೋಪ್‌ ಫ್ರಾನ್ಸಿಸ್‌, ಪ್ರಪಂಚದಾದ್ಯಂತ ಇರುವ ಕ್ಯಾಥೋಲಿಕ್‌ ಪಾದ್ರಿಗಳಿಗೆ  ಕರೆ ನೀಡಿದ್ದಾರೆ.

ಗರ್ಭಪಾತವನ್ನು ವಿರೋಧಿಸುವ ಕ್ಯಾಥೋಲಿಕ್‌ ಸಮುದಾಯದಲ್ಲೇ ಪೋಪ್‌ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸಾಂಪ್ರದಾಯಿಕ ಕ್ಯಾಥೋಲಿಕ್‌ ಕ್ರಿಶ್ಚಿಯನ್ನರು, ಚರ್ಚ್‌ಗಳು ಈ ನಿರ್ಧಾರಕ್ಕೆ  ವಿರೋಧ ವ್ಯಕ್ತಪಡಿಸಿದ್ದಾರೆ.

ಗರ್ಭಪಾತ ಮಾಡಿಸಿಕೊಂಡ ಹಲವು ಮಹಿಳೆಯರನ್ನು ನಾನು ಭೇಟಿಯಾಗಿದ್ದಾನೆ. ಅವರ ಯಾತನೆಯನ್ನೂ ಕೇಳಿದ್ದೇನೆ.  ಕೆಲವರು ತಮ್ಮ  ಮುಂದೆ ಬೇರೆ ಆಯ್ಕೆಗಳೇ ಇಲ್ಲ ಎನ್ನುವ ಸಂದರ್ಭ ಬಂದಾಗ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ಯಾಥೋಲಿಕ್‌ ಧರ್ಮಸಭೆ ಪವಿತ್ರ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಕ್ಷಮೆ ನೀಡೋಣ ಎಂದು ಪೋಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT