ADVERTISEMENT

ಗಲ್ಲುಶಿಕ್ಷೆ ಉತ್ತರವಲ್ಲ: ಅಮ್ನೆಸ್ಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಲಂಡನ್‌ (ಪಿಟಿಐ): ಗಲ್ಲುಶಿಕ್ಷೆ ಮೇಲಿನ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿರುವ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರ ನಿರ್ಧಾರವನ್ನು ಖಂಡಿಸಿರುವ ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌, ಪಾಕ್‌ ಸರ್ಕಾರ ಪೆಶಾವರ ಶಾಲಾ ದುರಂತಕ್ಕೆ ಗಲ್ಲುಶಿಕ್ಷೆ ಮೇಲಿನ ನಿಷೇಧ ಹಿಂತೆಗೆತ ಸೂಕ್ತ ಉತ್ತರವಾಗಲಾರದು ಎಂದು ಹೇಳಿದೆ.

‘ಮಂಗಳವಾರ ನಡೆದ ದಾಳಿ ಖಂಡನಾರ್ಹ. ಈ ದುರಂತಕ್ಕೆ ಬಲಿಯಾದವರಿಗೆ ನ್ಯಾಯ ದೊರಕಿಸುವುದು ಅತ್ಯಗತ್ಯ. ಆದರೆ ಗಲ್ಲುಶಿಕ್ಷೆ ಜಾರಿ ಇದಕ್ಕೆ ಎಂದಿಗೂ ಉತ್ತರವಾಗಲಾರದು’ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಏಷ್ಯಾಪೆಸಿಫಿಕ್‌ ವಿಭಾಗದ ಉಪ ನಿರ್ದೇಶಕ ಡೇವಿಡ್‌ ಗ್ರಿಫಿತ್‌ ಹೇಳಿದ್ದಾರೆ.

‘ದಾಳಿಯ ಕಾರಣ ಪಾಕ್‌ ಭಯ ಮತ್ತು ಕೋಪಕ್ಕೆ ಒಳಗಾಗಿರುವುದು ಅರ್ಥವಾಗುತ್ತದೆ. ಗಲ್ಲುಶಿಕ್ಷೆ ಮೇಲೆ ಹೇರಿದ್ದ ನಿರ್ಬಂಧ ತೆಗೆಯುವುದು ಅನಾಲೋಚಿತ ಪ್ರತಿಕ್ರಿಯೆಯಾಗುತ್ತ­ದೆಯೇ ಹೊರತು ಮೂಲ ಸಮಸ್ಯೆಗೆ ಪರಿಹಾರ ಒದಗಿಸಲಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.