ADVERTISEMENT

‘ಗೂಗಲ್‌’ನಲ್ಲಿ ಫೀಡ್‌ ಸೇರ್ಪಡೆ; ಫೇಸ್‌ಬುಕ್‌ ‘ನ್ಯೂಸ್‌ ಫೀಡ್‌’ಗೆ ಪೈಪೋಟಿ?

ಏಜೆನ್ಸೀಸ್
Published 19 ಜುಲೈ 2017, 11:43 IST
Last Updated 19 ಜುಲೈ 2017, 11:43 IST
‘ಗೂಗಲ್‌’ನಲ್ಲಿ ಫೀಡ್‌ ಸೇರ್ಪಡೆ; ಫೇಸ್‌ಬುಕ್‌ ‘ನ್ಯೂಸ್‌ ಫೀಡ್‌’ಗೆ ಪೈಪೋಟಿ?
‘ಗೂಗಲ್‌’ನಲ್ಲಿ ಫೀಡ್‌ ಸೇರ್ಪಡೆ; ಫೇಸ್‌ಬುಕ್‌ ‘ನ್ಯೂಸ್‌ ಫೀಡ್‌’ಗೆ ಪೈಪೋಟಿ?   

ಸ್ಯಾನ್‌ ಫ್ರಾನ್ಸಿಸ್ಕೋ: ಮೊಬೈಲ್‌ ಫೋನ್‌ ಆ್ಯಪ್‌ ಮೂಲಕ ಹಲವು ವಿಷಯಗಳ ಹುಡುಕಾಟ ನಡೆಸುವವರಿಗಾಗಿ ಹೊಸ ಅಂಶಗಳನ್ನು ಸೇರ್ಪಡೆಗೊಳಿಸಿರುವುದಾಗಿ ಗೂಗಲ್ ಪ್ರಕಟಿಸಿದೆ.

‘ಗೂಗಲ್‌ ಫೀಡ್‌’ ಮೂಲಕ ಹವ್ಯಾಸ, ಪ್ರಯಾಣ, ಕ್ರೀಡೆ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸುಲಭವಾಗಿ ಸಿಗಲಿದೆ. ಇದರಿಂದಾಗಿ ಸರ್ಚ್‌ ಎಂಜಿನ್ ಸಂಸ್ಥೆ ಗೂಗಲ್‌ ‘ಫೇಸ್‌ಬುಕ್‌’ನಂತಹ ಸಾಮಾಜಿಕ ಸಂಪರ್ಕ ತಾಣಗಳೊಂದಿಗೆ ನೇರ ಪೈಪೋಟಿ ಸಾಧ್ಯವಾಗಲಿದೆ.

‘ಆಲ್ಫಬೆಟ್‌’ ಸಹಸಂಸ್ಥೆಯಾಗಿರುವ ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್‌ ಎಂಜಿನ್‌ ‘ಗೂಗಲ್‌’ ಆ್ಯಪ್‌ನಲ್ಲಿನ ಬದಲಾವಣೆ ಬುಧವಾರದಿಂದ ಅಮೆರಿಕದ ಬಳಕೆದಾರರು ಕಾಣಬಹುದಾಗಿದೆ. ಮುಂಬರುವ ದಿನಗಳಲ್ಲಿ ಗೂಗಲ್‌ ಫೀಡ್‌ ಇತರೆ ರಾಷ್ಟ್ರಗಳ ಬಳಕೆದಾರರಿಗೂ ವಿಸ್ತರಿಸಲಿದೆ.

ADVERTISEMENT

ಏನೆಲ್ಲ ಇದೆ: ಫೇಸ್‌ಬುಕ್‌ನಲ್ಲಿ ಗೆಳೆಯರು ಹಾಗೂ ಇತರೆ ಮೂಲಗಳಿಂದ  ಮಾಹಿತಿ ಅಥವಾ ಅಪ್‌ಡೇಟ್‌ ಪಡೆಯಲು ಬಳಸುವ ‘ನ್ಯೂಸ್‌ ಫೀಡ್‌’ನಂತೆ ಗೂಗಲ್‌ ಫೀಡ್‌ ಸಹ ಬಳಕೆಯಾಗಲಿದೆ ಎನ್ನಲಾಗಿದೆ.

ಆದರೆ, ‘ಫೇಸ್‌ಬುಕ್‌ನ ನಕಲು ಇದಲ್ಲ’ ಎಂದು ಗೂಗಲ್‌ ಪ್ರತಿಕ್ರಿಯಿಸಿದೆ. ನಿಮ್ಮ ಸ್ನೇಹಿತರ ಆಸಕ್ತಿಯ ವಿಷಯಗಳನ್ನು ಪ್ರದರ್ಶಿಸುವ ವೇದಿಕೆಯಲ್ಲ, ಇಲ್ಲಿ ನಿಮ್ಮದೇ ಆಸಕ್ತಿಯ ವಿಷಯಗಳನ್ನು ಕಾಣಬಹುದು ಎಂದು ಗೂಗಲ್‌ ಎಂಜಿನಿಯರಿಂಗ್‌ ವಿಭಾಗದ ಉಪಾಧ್ಯಕ್ಷ ಬೆನ್‌ ಗೋಮ್ಸ್‌ ಹೇಳಿದ್ದಾರೆ.

ಬಳಕೆದಾರರು ಗೂಗಲ್‌ ಸರ್ಚ್‌ನಲ್ಲಿ ಈ ಹಿಂದೆ ಹುಡುಕಾಡಿದ ವಿಷಯಗಳು, ಯುಟ್ಯೂಬ್‌, ಜಿಮೇಲ್‌ ಹಾಗೂ ಗೂಗಲ್‌ ಕ್ಯಾಲೆಂಡರ್‌ನ ಮಾಹಿತಿ ಆಧರಿಸಿ ಗೂಗಲ್‌ ಫೀಡ್‌ ಪೂರಕ ಲಿಂಕ್‌ಗಳನ್ನು ನೀಡುತ್ತದೆ ಎಂದು ಗೂಗಲ್‌ ತಿಳಿಸಿದೆ.

ಇ–ಮಾರ್ಕೆಟರ್‌ ಸಂಶೋಧನಾ ಸಂಸ್ಥೆಯ ಪ್ರಕಾರ ಅಮೆರಿಕದ ಗೂಗಲ್‌ ಹಾಗೂ ಫೇಸ್‌ಬುಕ್‌ 2018ರ ವೇಳೆಗೆ ಆನ್‌ಲೈನ್‌ ಜಾಹೀರಾತಿನ ಶೇ 50ರಷ್ಟು ಪಾಲನ್ನು ಹೊಂದಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.