ನ್ಯೂಯಾರ್ಕ್ (ಪಿಟಿಐ): ಮೊದಲ ಯಾನದಲ್ಲೇ ದುರಂತಕ್ಕೀಡಾದ ಬೃಹತ್ ಹಡಗು ‘ಟೈಟಾನಿಕ್’ನಲ್ಲಿ ಮೊದಲ ದರ್ಜೆ ಪ್ರಯಾಣಿಕರಿಗೆ ಕೊನೆಯದಾಗಿ ವಿತರಿಸಿದ್ದ ಮೆನು ಕಾರ್ಡ್ (ಆಹಾರ ಪಟ್ಟಿ) ಹರಾಜಿನಲ್ಲಿ 88 ಸಾವಿರ ಡಾಲರ್ಗೆ (ಸುಮಾರು ₹ 58 ಲಕ್ಷ) ಮಾರಾಟವಾಗಿದೆ.
ಆಹಾರ ಪಟ್ಟಿಯನ್ನು ಪ್ರಯಾಣಿಕ ಅಬ್ರಹಾಂ ಲಿಂಕನ್ ಸಾಲೊಮನ್ ಅವರು ಜತನವಾಗಿ ತೆಗೆದಿಟ್ಟುಕೊಂಡಿದ್ದರು. ಇದರಲ್ಲಿ ಸೀಗಡಿ, ಕುರಿ ಮಾಂಸ, ಆ್ಯಪಲ್ ಹಲ್ವಾ ಮೊದಲಾದವು ಸೇರಿವೆ.
ಮೊದಲ ದರ್ಜೆಯ ಪ್ರಯಾಣಿಕರಾಗಿದ್ದ ಐಸಾಕ್ ಗೆರಾಲ್ಡ್ ಫ್ರೌತಲ್ ಅವರು ಈ ಆಹಾರ ಪಟ್ಟಿಗೆ ಸಹಿ ಮಾಡಿ ಹಿಂದಿರುಗಿಸಿದ್ದರು. ಇವರು ಹಡಗು ದುರಂತದಲ್ಲಿ ಮೃತಪಟ್ಟಿದ್ದಾರೆ.
ಈ ಪಟ್ಟಿಯಲ್ಲಿದ್ದ ಆಹಾರವನ್ನು ಟೈಟಾನಿಕ್ ಹಡಗು ಸೌತ್ಹ್ಯಾಂಪ್ಟನ್ನಿಂದ ಅಮೆರಿಕಾದ ನ್ಯೂಯಾರ್ಕ್ಗೆ ಹೊರಡುವ ಮೊದಲು ಪ್ರಯಾಣಿಕರಿಗೆ ವಿತರಿಸಲಾಗಿತ್ತು.
1912ರ ಏಪ್ರಿಲ್ 14ರಂದು ಟೈಟಾನಿಕ್ ಹಡಗು ದುರಂತ ಸಂಭವಿಸಿದ್ದು, 1,517 ಜನರು ಸಾವನ್ನಪ್ಪಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.