ADVERTISEMENT

ಟ್ರಂಪ್ ಅಳಿಯನ ವಿಚಾರಣೆ

ಏಜೆನ್ಸೀಸ್
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಟ್ರಂಪ್ ಅಳಿಯನ ವಿಚಾರಣೆ
ಟ್ರಂಪ್ ಅಳಿಯನ ವಿಚಾರಣೆ   

ವಾಷಿಂಗ್ಟನ್ : ಕಳೆದ ವರ್ಷ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮಧ್ಯಸ್ಥಿಕೆಗೆ ಸಂಬಂಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರ್ಡ್ ಕುಶ್ನರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಟ್ರಂಪ್ ಹಿರಿಯ ಸಲಹೆಗಾರರೂ ಆದ ಕುಶ್ನೆರ್ ಅವರನ್ನು ಸೆನೆಟ್ ಇಂಟೆಲಿಜೆನ್ಸ್ ಕಮಿಟಿ ಗೋಪ್ಯ ಸ್ಥಳದಲ್ಲಿ ಸೋಮವಾರ ವಿಚಾರಣೆಗೆ ಒಳಪಡಿಸಿತು.

ನಿರ್ಬಂಧ ವಾಪಸ್?: ರಷ್ಯಾ ಮೇಲೆ ಹೇರಿದ್ದ ಆರ್ಥಿಕ ನಿರ್ಬಂಧ ಹಿಂಪಡೆಯುವ ಒಪ್ಪಂದಕ್ಕೆ ಟ್ರಂಪ್ ಭಾನುವಾರ ಸಹಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ನಿರ್ಬಂಧ ಹಿಂಪಡೆಯುವುದಕ್ಕೂ ಮುನ್ನ ಸಂಸತ್ತಿನಲ್ಲಿ ಒಪ್ಪಿಗೆ ಪಡೆಯಬೇಕಿದೆ. ಇದೇ ವಾರ ಈ ಸಂಬಂಧ ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮಧ್ಯಸ್ಥಿಕೆ ಕುರಿತಂತೆ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಟ್ರಂಪ್ ಅವರು ಈ ನಿರ್ಧಾರ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.