ADVERTISEMENT

ಟ್ರಂಪ್ ವಿರುದ್ಧ ಮತ್ತೆ ಲೈಂಗಿಕ ದೌರ್ಜನ್ಯ ಆರೋಪ

ಲೈಂಗಿಕ ದೌರ್ಜನ್ಯ

ಪಿಟಿಐ
Published 23 ಅಕ್ಟೋಬರ್ 2016, 19:30 IST
Last Updated 23 ಅಕ್ಟೋಬರ್ 2016, 19:30 IST

ಕ್ಲೀವ್‌ಲ್ಯಾಂಡ್ : ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ನೀಲಿ ಚಿತ್ರ ತಾರೆ ಜೆಸ್ಸಿಕಾ ಡ್ರೇಕ್ ಆರೋಪಿಸಿದ್ದಾರೆ. ಇದರೊಂದಿಗೆ, ಈವರೆಗೆ 11 ಮಹಿಳೆಯರು ಟ್ರಂಪ್ ವಿರುದ್ಧ ಆರೋಪ ಮಾಡಿದಂತಾಗಿದೆ.

2006ರಲ್ಲಿ ನೆವಾಡಾದಲ್ಲಿ ದತ್ತಿ ಉದ್ದೇಶಕ್ಕೆ ನಡೆಸಲಾಗಿದ್ದ ಗಾಲ್ಫ್ ಪಂದ್ಯಾವಳಿ ಸಂದರ್ಭ ಟ್ರಂಪ್ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅನುಮತಿ ಇಲ್ಲದೆ ಚುಂಬಿಸಿದ್ದರು. ಲೈಂಗಿಕ ಕ್ರಿಯೆಗೂ ಆಹ್ವಾನಿಸಿದ್ದರು ಎಂದು ಡ್ರೇಕ್ ಆರೋಪಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಮತ್ತೊಂದು ಆರೋಪ ಕೇಳಿಬಂದಿರುವುದು ಟ್ರಂಪ್‌ ಅವರಿಗೆ ಹಿನ್ನಡೆಯಾಗಿದೆ.

ಏತನ್ಮಧ್ಯೆ, ಟ್ರಂಪ್ ಜೊತೆ ತೆರಳಲು ನಿರಾಕರಿಸಿದ್ದಕ್ಕೆ ಅವರು ತಮ್ಮ ವಿರುದ್ಧ ಮಾಧ್ಯಮದಲ್ಲಿ ಸುಳ್ಳು ವರದಿ ಪ್ರಕಟಿಸಲು ಕಾರಣವಾಗಿದ್ದರು ಎಂದು ಅಮೆರಿಕದ ನಟಿ ಸಲ್ಮಾ ಹಯೆಕ್ ಆರೋಪಿಸಿದ್ದಾರೆ. ‘ಎಟಿ ಆ್ಯಂಡ್‌ ಟಿ’ ಸಂಸ್ಥೆಯು ಮನರಂಜನಾ ಮಾಧ್ಯಮ ಸಂಸ್ಥೆ ‘ಟೈಮ್‌ ವಾರ್ನರ್ ಸಮೂಹ’ವನ್ನು 5.7 ಲಕ್ಷ ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸುವ ಒಪ್ಪಂದಕ್ಕೆ ತಡೆಯೊಡ್ಡುವುದಾಗಿ ಟ್ರಂಪ್ ಬೆದರಿಕೆಯೊಡ್ಡಿದ್ದಾರೆ.  ಇಂಥ ಒಪ್ಪಂದಗಳು ಕೆಲವೇ ಕೆಲವು ಜನರ ಕೈಗಳಲ್ಲಿ ಅಧಿಕಾರ ಉಳಿಯುವಂತೆ ಮಾಡುತ್ತವೆ ಎಂದಿದ್ದಾರೆ. ನ. 8ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಜಯಗಳಿಸುವುದಾಗಿಯೂ  ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.