ADVERTISEMENT

ಡಬ್ಲುಟಿಒದಲ್ಲಿ ಅಮೆರಿಕದ ವಿರುದ್ಧ ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 19:30 IST
Last Updated 4 ಜೂನ್ 2015, 19:30 IST

ಜಿನಿವಾ (ಪಿಟಿಐ): ಕೋಳಿ ಉತ್ಪನ್ನಗಳ ಆಮದಿಗೆ ಸಂಬಂಧಿಸಿದಂತೆ ವಿಶ್ವವಾಣಿಜ್ಯ ಸಂಸ್ಥೆಯಲ್ಲಿ (ಡಬ್ಲುಟಿಒ) ಭಾರತಕ್ಕೆ ಅಮೆರಿಕದ ವಿರುದ್ಧ ಸೋಲಾಗಿದೆ.

ಹಕ್ಕಿಜ್ವರದ ಕಾರಣ ಮಂದೊಡ್ಡಿ  ಭಾರತವು ಅಮೆರಿಕದಿಂದ ಬರುವ ಕೋಳಿ ಉತ್ಪನ್ನಗಳಿಗೆ ನಿಷೇಧ ಹೇರಿತ್ತು.

ಆದರೆ, ವಿಶ್ವ ವಾಣಿಜ್ಯ ಸಂಸ್ಥೆಯ ಪರಿಶೀಲನಾ ಸಮಿತಿಯು ಭಾರತ ಹೇರಿರುವ ನಿಷೇಧ ಅಂತರರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿಲ್ಲ ಎಂದು ಹೇಳಿದೆ.

ಹಕ್ಕಿಜ್ವರದ ಭೀತಿ ಇರುವ ಇನ್ಯಾವುದೇ ದೇಶದ ಕೋಳಿ ಉತ್ಪನ್ನದ ಮೇಲೆ ಭಾರತ ನಿಷೇಧ ಹೇರಿಲ್ಲ. ಕೇವಲ ಅಮೆರಿಕದ ಉತ್ಪನ್ನಗಳನ್ನು ನಿರ್ಬಂಧಿಸಿದೆ. ಅಲ್ಲದೇ ಕೋಳಿ ಉತ್ಪನ್ನ ಆಮದಿನಿಂದ ಆಗುವ ಅಪಾಯ ಏನು ಎಂಬುದರ ಕುರಿತು ಅಧ್ಯಯನ ನಡೆಸಿಲ್ಲ ಎಂದು ಪರಿಶೀಲನಾ ಸಮಿತಿ ಹೇಳಿದೆ.

ಡಬ್ಲುಟಿಒ ನಿರ್ಧಾರವನ್ನು ಜಾರಿಗೊಳಿಸಲು ಭಾರತಕ್ಕೆ 12ರಿಂದ 18 ತಿಂಗಳ ಕಾಲಾವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.