ADVERTISEMENT

ದೋಣಿ ದುರಂತ: 120ಕ್ಕೂ ಹೆಚ್ಚು ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ಜಿಂಡೊ (ಎಎಫ್‌ಪಿ): ದಕ್ಷಿಣ ಕೊರಿ­ಯಾದ ಜಿಂಡೊ ದ್ವೀಪದ ಬಳಿ ಸಂಭ­ವಿಸಿದ ದೋಣಿ ದುರಂತ­­ದಲ್ಲಿ ಮೃತ­ಪಟ್ಟವರ ಸಂಖ್ಯೆ ಮಂಗಳವಾರ ನೂರರ ಗಡಿ ದಾಟಿದೆ.

ಅಧಿಕೃತ ಮಾಹಿತಿ ಪ್ರಕಾರ 120ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿದ್ದು, 194 ಮಂದಿ ನಾಪತ್ತೆ­ಯಾ­ಗಿದ್ದಾರೆ.
ದೋಣಿಯಲ್ಲಿದ್ದ ಪ್ರಯಾಣಿಕರ ಸಂಬಂ­­­ಧಿ­ಗಳಿಂದ ಒತ್ತಡ ಹೆಚ್ಚಿದ ನಂತರ ಮುಳುಗು ತಜ್ಞರು ಮೃತದೇಹ ಪತ್ತೆ ಹಚ್ಚುವ ಕಾರ್ಯ ತೀವ್ರ ಗೊಳಿಸಿ­ದ್ದಾರೆ.

ಕಡಲ್ಗಾವಲು ಪಡೆಯ ನಿಧಾನ ಗತಿಯ ಕಾರ್ಯಾಚರಣೆಯನ್ನು ಪ್ರಧಾನಿ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಟೀಕಿಸಿದ್ದಾರೆ.

ಮುಳುಗು ತಜ್ಞರು ಕತ್ತಲು ಆವರಿಸಿದ ದೋಣಿ ಕ್ಯಾಬಿನ್‌ ಮತ್ತು ಕಾರಿಡಾರ್‌ನಲ್ಲಿ ಶೋಧ ಕಾರ್ಯ ನಡೆಸಬೇಕಾಗಿದೆ.

ದೋಣಿ ಅಪಾಯದಲ್ಲಿದ್ದರೂ ಕ್ಯಾಪ್ಟನ್‌ ಪ್ರಯಾಣಿಕರಿಗೆ ಸರಿಯಾದ ಸೂಚನೆ ನೀಡದೇ ಇರುವುದರಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಲು ಕಾರಣ. ದೋಣಿ ತೊರೆಯಿರಿ ಎನ್ನುವ ಸಂದೇಶ ಬಂದಾಗ ಪ್ರಯಾಣಿಕರು ದೋಣಿ ತೊರೆಯುವುದು ಅಸಾಧ್ಯ­ವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.