ADVERTISEMENT

ನಿರ್ಣಯ ಮಂಡಿಸುವಾಗಲೇ ಎದೆ ಹಾಲುಣಿಸಿದ ಸಂಸದೆ

ಒಳ್ಳೆ ಸುದ್ದಿ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ನಿರ್ಣಯ ಮಂಡಿಸುವಾಗ ಎದೆ ಹಾಲುಣಿಸಿದ ಸಂಸದೆ ಲ್ಯಾರಿಸ್‌ ವಾಟರ್ಸ್‌
ನಿರ್ಣಯ ಮಂಡಿಸುವಾಗ ಎದೆ ಹಾಲುಣಿಸಿದ ಸಂಸದೆ ಲ್ಯಾರಿಸ್‌ ವಾಟರ್ಸ್‌   

ಮೆಲ್ಬರ್ನ್‌: ಸಂಸತ್ತಿನಲ್ಲಿ ನಿರ್ಣಯ ಮಂಡಿಸುವಾಗಲೇ ಮಗುವಿಗೆ ಎದೆ ಹಾಲುಣಿಸುವ ಮೂಲಕ ಆಸ್ಟ್ರೇಲಿಯಾದ ಸಂಸದೆ ಲ್ಯಾರಿಸ್‌ ವಾಟರ್ಸ್‌ ಗಮನಸೆಳೆದಿದ್ದಾರೆ.

ಲ್ಯಾರಿಸ್‌ ಅವರು ತಮ್ಮ 14 ವಾರಗಳ ಮಗುವಿಗೆ ಎದೆ ಹಾಲುಣಿಸುವಾಗ ಗುರುವಾರ ಸದನದಲ್ಲಿ ನಿರ್ಣಯವೊಂದನ್ನು ಮಂಡಿಸಿದರು.

ಕಳೆದ ತಿಂಗಳು ಸಹ ಲ್ಯಾರಿಸ್‌ ವಾಟರ್ಸ್‌ ಅವರು ಸಂಸತ್ತಿನಲ್ಲಿ ತಮ್ಮ ಮಗುವಿಗೆ ಹಾಲುಣಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

ADVERTISEMENT

‘ಮಗುವಿಗೆ ಎದೆ ಹಾಲುಣಿಸುವಾಗಲೇ ನಿರ್ಣಯ ಮಂಡಿಸಬೇಕಾಯಿತು. ನನ್ನ ಮಗುವಿಗೆ ಆಶೀರ್ವದಿಸಿ’ ಎಂದು ಲ್ಯಾರಿಸ್‌ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.