ADVERTISEMENT

ನ್ಯೂಜೆರ್ಸಿಯಲ್ಲಿ ಭಾರತ ಮೂಲದ ಮಹಿಳೆ ಮತ್ತು ಪುತ್ರ ಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 10:13 IST
Last Updated 24 ಮಾರ್ಚ್ 2017, 10:13 IST
ನ್ಯೂಜೆರ್ಸಿಯಲ್ಲಿ ಭಾರತ ಮೂಲದ ಮಹಿಳೆ ಮತ್ತು ಪುತ್ರ ಹತ್ಯೆ
ನ್ಯೂಜೆರ್ಸಿಯಲ್ಲಿ ಭಾರತ ಮೂಲದ ಮಹಿಳೆ ಮತ್ತು ಪುತ್ರ ಹತ್ಯೆ   

ನ್ಯೂಜೆರ್ಸಿ: ನ್ಯೂಜೆರ್ಸಿಯಲ್ಲಿ ವಾಸವಾಗಿದ್ದ 40ರ ಹರೆಯದ ಆಂಧ್ರಪ್ರದೇಶದ ಮಹಿಳೆ ಮತ್ತು ಆಕೆಯ ಏಳು ವರ್ಷದ ಪುತ್ರ ಗುರುವಾರ ಹತ್ಯೆಯಾಗಿದ್ದಾರೆ.

ತಾನು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ಎನ್. ಶಶಿಕಲಾ ಮತ್ತು ಪುತ್ರ ಅನೀಶ್ ಸಾಯಿ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದರು ಎಂದು ಹನುಮಂತರಾವ್ ಅವರು ಅಪ್ಪ ಸುಬ್ಬರಾವ್ ಅವರಿಗೆ ತಿಳಿಸಿದ್ದಾರೆ.

ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಶಶಿಕಲಾ ಅವರ ಪತಿ ಎಂ.ಹನುಮಂತರಾವ್ ಕೂಡಾ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಯಾಗಿದ್ದಾರೆ.

ADVERTISEMENT

ಈ ದಂಪತಿ ಕಳೆದ 10 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದಾರೆ. ಅವರಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಪ್ರತಿ ದಿನ ತಾನು ಮಗನೊಂದಿಗೆ ಸಂಪರ್ಕದಲ್ಲಿರುತ್ತಿದ್ದೆ  ಎಂದು ಆಂಧ್ರಪ್ರದೇಶದ ತಿಮರಾಜುಪಾಲೆಯಂ ಹಳ್ಳಿಯಲ್ಲಿ ವಾಸವಾಗಿರುವ ಸುಬ್ಬರಾವ್ ಹೇಳಿದ್ದಾರೆ.

ಅಮೆರಿಕದಲ್ಲಿ ಹತ್ಯೆಗೀಡಾಗಿರುವ ಮಹಿಳೆ ಮತ್ತು ಪುತ್ರನ ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡಿ ಎಂದು ಪಾರ್ಚೂರ್ ಶಾಸಕ ಉತ್ತರ ಅಮೆರಿಕದ ತೆಲುಗು ಅಸೋಸಿಯೇಷನ್ ಮತ್ತು ಆಂಧ್ರಮುಖ್ಯಮಂತ್ರಿ  ಎನ್. ಚಂದ್ರಬಾಬು ನಾಯ್ಡು  ಅವರಿಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.