ADVERTISEMENT

ಪತ್ನಿ ಶವ ಹೊತ್ತು ಸಾಗಿಸಿದ ವ್ಯಕ್ತಿಗೆ ಬಹರೇನ್‌ ನೆರವು

ಪಿಟಿಐ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST

ದುಬೈ: ವಾಹನದಲ್ಲಿ ಪತ್ನಿಯ ಶವ ಸಾಗಿಸಲು ಹಣವಿಲ್ಲದೆ ಹೆಗಲ ಮೇಲೆಯೇ 10 ಹೊತ್ತು ಸಾಗಿದ ಒಡಿಶಾದ ವ್ಯಕ್ತಿಗೆ ನೆರವು ನೀಡಲು ಬಹರೇನ್‌ ಸರ್ಕಾರ ಮುಂದೆ ಬಂದಿದೆ.

ಮೃತ ಅಮಂಗ್ ದೇವಿಯನ್ನು ಪತಿ ದಾನಾ  ಮಾಂಝಿ ಅವರು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ  ಮಾಧ್ಯಮ ವರದಿಗಳನ್ನು ಗಮನಿಸಿದ ಬಹರೇನ್‌  ಸರ್ಕಾರ ಹಣಕಾಸು ನೆರವು ನೀಡಲಿದೆ. ಈ ಬಗ್ಗೆ ಬೆಹರಿನ್‌ನಲ್ಲಿರುವ ಭಾರತದ ರಾಯಭಾರಿಗೆ ಪ್ರಧಾನಿ ಪ್ರಿನ್ಸ್‌ ಖಲೀಫಾ  ಬಿನ್ ಸಲ್ಮಾನ್‌ ಅಲ್‌ ಖಲೀಫಾ ಅವರ ಕಚೇರಿಯಿಂದ ಅಧಿಕೃತ ಮಾಹಿತಿ ಬರಲಿದೆ.

ನವದೆಹಲಿಯಲ್ಲಿರುವ ಬಹರೇನ್‌  ರಾಯಭಾರಿ ಕಚೇರಿ ಮೂಲಕ ಮಾಂಝಿ ಕುಟುಂಬಕ್ಕೆ ಹಣದ ನೆರವು ದೊರೆಯಲಿದೆ.

ಶವ ಸಾಗಿಸಲು ಹೆಣಗಾಡಿ ಹೊತ್ತು ಸಾಗಿಸಿದ ವರದಿ ನೋಡಿದ ಪ್ರಧಾನಿ ಖಲೀಫಾ ಹಣ ನೀಡುವ ತೀರ್ಮಾನವನ್ನು  ಕೈಗೊಂಡಿದ್ದಾರೆ ಎಂದು ‘ಗಲ್ಫ್‌  ನ್ಯೂಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.