ADVERTISEMENT

ಪನಾಮ ಪೇಪರ್ಸ್‌: ನವಾಜ್‌ ಷರೀಫ್‌ ವಿರುದ್ಧದ ಆರೋಪಗಳ ತನಿಖೆಗೆ ಜಂಟಿ ತನಿಖಾ ತಂಡ

ಏಜೆನ್ಸೀಸ್
Published 20 ಏಪ್ರಿಲ್ 2017, 11:46 IST
Last Updated 20 ಏಪ್ರಿಲ್ 2017, 11:46 IST
ಪಾಕಿಸ್ತಾನದ ಪ‍್ರಧಾನಮಂತ್ರಿ ನವಾಜ್ ಷರೀಫ್‌
ಪಾಕಿಸ್ತಾನದ ಪ‍್ರಧಾನಮಂತ್ರಿ ನವಾಜ್ ಷರೀಫ್‌   

ಇಸ್ಲಾಮಾಬಾದ್‌: ಪನಾಮ ಪೇಪರ್ಸ್‌ ಪ್ರಕರಣದಲ್ಲಿ ಪಾಕಿಸ್ತಾನದ ಪ‍್ರಧಾನಮಂತ್ರಿ ನವಾಜ್ ಷರೀಫ್‌ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ಜಂಟಿ ತನಿಖಾ ತಂಡ (ಜೆಐಟಿ) ರಚನೆಗೆ ಪಾಕಿಸ್ತಾನದ ಸುಪ್ರೀಂಕೋರ್ಟ್‌ ಗುರುವಾರ ಆದೇಶ ನೀಡಿದೆ.

ನವಾಜ್‌ ಷರೀಫ್‌ ಹಾಗೂ ಅವರ ಮಕ್ಕಳಾದ ಹಸನ್‌ ಮತ್ತು ಹುಸೇನ್‌ ಅವರು ಜೆಐಟಿ ಎದುರು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಆದೇಶಿಸಿದೆ.

ಆದರೆ, ಆರೋಪ ಎದುರಿಸುತ್ತಿರುವ ನವಾಜ್‌ ಷರೀಫ್‌ ಅವರು ಸದ್ಯಕ್ಕೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಅಗತ್ಯವಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹೀಗಾಗಿ ಷರೀಫ್‌ ಅವರಿಗೆ ಈ ಪ್ರಕರಣದಲ್ಲಿ ತಾತ್ಕಾಲಿಕ ನೆಮ್ಮದಿ ದೊರೆತಂತಾಗಿದೆ.

ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು ಪನಾಮ ಪೇಪರ್ಸ್‌ ಸೋರಿಕೆಯಿಂದ ಬಹಿರಂಗಗೊಂಡಿತ್ತು. ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಅವರ ಸೊಸೆ ಐಶ್ವರ್ಯಾ ರೈ ಹೆಸರೂ ಈ ಪಟ್ಟಿಯಲ್ಲಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.