ADVERTISEMENT

ಪಾಕ್‌ಗೆ ಬೆಂಬಲ ನೀಡಿಲ್ಲ: ಚೀನಾ ಸ್ಪಷ್ಟನೆ

ಪಿಟಿಐ
Published 26 ಸೆಪ್ಟೆಂಬರ್ 2016, 18:53 IST
Last Updated 26 ಸೆಪ್ಟೆಂಬರ್ 2016, 18:53 IST

ಬೀಜಿಂಗ್‌ : ಕಾಶ್ಮೀರ ವಿವಾದ ಕುರಿತ ಪಾಕ್‌ ನಿಲುವಿಗೆ ಚೀನಾ ಬೆಂಬಲ ನೀಡಲಿದೆ ಎಂಬ ಪಾಕಿಸ್ತಾನ ಮಾಧ್ಯಮಗಳ ವರದಿಯನ್ನು ಚೀನಾ ಅಲ್ಲಗಳೆದಿದೆ.

ವಾರಕ್ಕಿಂತಲೂ ಕಡಿಮೆ ಅವಧಿ ಯಲ್ಲಿ ಚೀನಾ ಎರಡನೇ ಬಾರಿ  ತನ್ನ ನಿಲುವು ಸ್ಪಷ್ಟಪಡಿಸಿದ್ದು, ಇದರಿಂದ ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದೆ. ಕಾಶ್ಮೀರ ಸಮಸ್ಯೆಯೂ ಸೇರಿದಂತೆ ವಿವಾದಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ನೆರೆಯ ರಾಷ್ಟ್ರ ಮತ್ತು ಸ್ನೇಹಿತನಾಗಿ ಮನವಿ ಮಾಡುವುದಾಗಿ ಚೀನಾ ತಿಳಿಸಿದೆ.

ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಜಂಟಿಯಾಗಿ ಶ್ರಮಿಸುವಂತೆಯೂ ಚೀನಾ ಕರೆ ನೀಡಿದೆ. ಲಾಹೋರ್‌ನಲ್ಲಿರುವ ಚೀನಾ ರಾಯಭಾರಿ ಯು ಬೊರೆನ್‌  ಅವರ ಪಾಕ್‌ಗೆ ಬೆಂಬಲ ನೀಡುವ ಹೇಳಿಕೆ  ವರದಿಗಳ ಕುರಿತ ಮಾಧ್ಯಮಗಳ ಪ್ರಶ್ನೆಗೆ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್‌ ಶಾಂಗ್‌ ಉತ್ತರ ನೀಡಿದ್ದು, ‘ರಾಯಭಾರಿ ಹೇಳಿಕೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಪಾಕಿಸ್ತಾನ ಕುರಿತ ಚೀನಾ ನಿಲುವು ಸ್ಪಷ್ಟವಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.