ADVERTISEMENT

ಪಿಸ್ಟೋರಿಯಸ್‌ಗೆ ಐದು ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 10:09 IST
Last Updated 21 ಅಕ್ಟೋಬರ್ 2014, 10:09 IST

ಪ್ರಿಟೋರಿಯ (ಎಎಫ್‌ಪಿ): ಗೆಳತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಪ್ಯಾರಾ ಅಥ್ಲೀಟ್‌ ಆಸ್ಕರ್‌ ಪಿಸ್ಟೋರಿಯಸ್‌ಗೆ  5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಿಟೋರಿಯ ಹೈಕೋರ್ಟ್‌ನಲ್ಲಿ ನ್ಯಾಯಾಧೀಶೆ ತೊಕೊ ಜಿಲ್‌ ಮಸಿಪಾ ಅವರು ಮಂಗಳವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು.

ಕಳೆದ ವರ್ಷ ‘ಪ್ರೇಮಿಗಳ ದಿನ’ ದಂದು ಪಿಸ್ಟೋರಿಯಸ್‌ ತನ್ನ ಗೆಳತಿ ರೀವಾ ಸ್ಟೀನ್‌ಕಾಂಪ್‌ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಆದರೆ ಅವರು ‘ಉದ್ದೇಶಪೂರ್ವಕ ಕೊಲೆ’ ಆರೋಪದಿಂದ ಪಾರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT