ADVERTISEMENT

ಪ್ರಚೋದನಕಾರಿ ಹೇಳಿಕೆಗೆ ಉತ್ತರ ಕೊರಿಯಾ ಖಂಡನೆ

ಏಜೆನ್ಸೀಸ್
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
ಪ್ರಚೋದನಕಾರಿ ಹೇಳಿಕೆಗೆ ಉತ್ತರ ಕೊರಿಯಾ ಖಂಡನೆ
ಪ್ರಚೋದನಕಾರಿ ಹೇಳಿಕೆಗೆ ಉತ್ತರ ಕೊರಿಯಾ ಖಂಡನೆ   

ಸೋಲ್‌: ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ನಡೆಸುವ ಮತ್ತು ಯುದ್ಧಾಸಕ್ತ ಹೇಳಿಕೆಗಳನ್ನುಮುಂದುವರಿಸಿವೆ. ಇದು ಹೀಗೆಯೇ ಮುಂದುವರಿದರೆ ಯುದ್ಧ ಅನಿವಾರ್ಯವಾಗಲಿದೆ ಎಂದು ಉತ್ತರ ಕೊರಿಯಾ ಹೇಳಿದೆ.

‘ಸಿಐಎ ನಿರ್ದೇಶಕ ಮೈಕ್‌ ಪೊಂಪಿಯೊ ಸೇರಿದಂತೆ ಅಮೆರಿಕದ ಉನ್ನತ ಅಧಿಕಾರಿಗಳು ಯುದ್ಧಕ್ಕೆ ಪ್ರಚೋದನೆ ನೀಡುವ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿಕೆ ನೀಡಿದ್ದಾರೆ.

‘ಉತ್ತರ ಕೊರಿಯಾ ಸರ್ವೋಚ್ಛ ನಾಯಕನನ್ನು ವಿನಾಕಾರಣ ಅವರು ಟೀಕಿಸುತ್ತಿದ್ದಾರೆ’ ಎಂದು ವಕ್ತಾರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.