ADVERTISEMENT

ಬಕಿಂಗ್‌ಹ್ಯಾಮ್: ಶುಚಿತ್ವ ಕೆಲಸಕ್ಕೆ ಬೇಕಾಗಿದ್ದಾರೆ!

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ಲಂಡನ್: ಬಕಿಂಗ್‌ಹ್ಯಾಮ್ ಅರಮನೆಯಲ್ಲಿರುವ ಐತಿಹಾಸಿಕ ಹೂಕೂಂಡಗಳು, ಅಮೂಲ್ಯವಾದ ವರ್ಣ ಕಲಾಕೃತಿಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಉನ್ನತ ಕಾರ್ಯಕ್ಷಮತೆವುಳ್ಳ ಕೆಲಸದವರನ್ನು ನೇಮಕ ಮಾಡಿಕೊಳ್ಳಲು ರಾಣಿ ಎರಡನೇ ಎಲಿಜಬೆತ್ ಮುಂದಾಗಿದ್ದಾರೆ.

ಕೆಲಸಕ್ಕೆ ಅರ್ಜಿ ಹಾಕಲು ಬಯಸುವವರು ಉತ್ತಮ ಜ್ಞಾನ ಹೊಂದಿರಬೇಕು. ರಾಜ ಪರಿವಾರ, ಅತಿಥಿಗಳು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು  ರಾಣಿ ಹಾಗೂ ರಾಜಪರಿವಾರಕ್ಕೆ ಎಲ್ಲ ರೀತಿಯ ಸೇವೆ ಒದಗಿಸುವ ರಾಯಲ್ ಹೌಸ್‌ಹೋಲ್ಡ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ಜವಾಬ್ದಾರಿ: ಒಳಾಂಗಣ ವಿನ್ಯಾಸದ ವಸ್ತುಗಳು, ಐತಿಹಾಸಿಕವಾದ ಹೂಕೂಂಡಗಳು, ಕಲಾಕೃತಿಗಳು, ನೆಲಹಾಸು, ಪೀಠೋಪಕರಣಗಳ ಸ್ವಚ್ಛತೆ ಹಾಗೂ ನಿರ್ವಹಣೆ. ಅತಿಥಿಗಳ ಯೋಗಕ್ಷೇಮ.

ಅರ್ಹತೆ: ಉತ್ತಮ ಸಂವಹನ ಕೌಶಲ, ಎಲ್ಲ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯ,  ಮನೆಕೆಲಸ/ಅತಿಥಿ ಉಪಚಾರದಲ್ಲಿ ಅನುಭವ.

*
ಸೌಲಭ್ಯಗಳು
ವಾರಕ್ಕೆ ಐದು ದಿನ ಕೆಲಸ, 33 ದಿನ ರಜೆ ಹಾಗೂ ಪಿಂಚಣಿ ಸೌಲಭ್ಯ, ವಸತಿ ವ್ಯವಸ್ಥೆ. ಸಂಬಳ ಇನ್ನೂ ನಿಗದಿಪಡಿಸಿಲ್ಲ. ಅರ್ಜಿ ಸಲ್ಲಿಸಲು  ಸೆ. 18 ಕೊನೆ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.