ADVERTISEMENT

ಬಾಕ್ಸಿಂಗ್‌ ಅಖಾಡದಲ್ಲಿ ಹಿಜಬ್‌ ಧರಿಸಲು ಅವಕಾಶ ಪಡೆದ ಯುವತಿ

ಪಿಟಿಐ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಬಾಕ್ಸಿಂಗ್‌ ಅಖಾಡದಲ್ಲಿ ಹಿಜಬ್‌ ಧರಿಸಲು ಅವಕಾಶ ಪಡೆದ ಯುವತಿ
ಬಾಕ್ಸಿಂಗ್‌ ಅಖಾಡದಲ್ಲಿ ಹಿಜಬ್‌ ಧರಿಸಲು ಅವಕಾಶ ಪಡೆದ ಯುವತಿ   

ವಾಷಿಂಗ್ಟನ್: ಅಮೆರಿಕದ ಮುಸ್ಲಿಂ ಯುವತಿಯೊಬ್ಬಳು ಬಾಕ್ಸಿಂಗ್‌ ಸ್ಪರ್ಧೆಯ ವೇಳೆ ಹಿಜಬ್‌ ಮತ್ತು ಕೈ ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚುವಂತಹ ಉಡುಗೆ ಧರಿಸುವ ಹಕ್ಕು ಹೊಂದುವ ಹೋರಾಟದಲ್ಲಿ ಜಯಿಸಿದ್ದಾಳೆ.

ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಬಯಸಿರುವ ಮಿನ್ನೆಸೊಟಾದ ಓಕ್‌ಡೇಲ್‌ನ 16 ವರ್ಷದ ಅಮಯ್ಯಾ ಜಾಫರ್‌, ಧರ್ಮ ಅಥವಾ ಬಾಕ್ಸಿಂಗ್‌ನಲ್ಲಿ ಒಂದನ್ನು ಆಯ್ದುಕೊಳ್ಳುವ ಸಂಕಟದಿಂದ ಪಾರಾಗಿದ್ದಾಳೆ.

ಅಮೆರಿಕದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಹಿಜಬ್‌ ಮತ್ತು ಕೈ ಕಾಲುಗಳನ್ನು ಮುಚ್ಚುವ ಉಡುಪು ಧರಿಸಿ ಆಡುವ ವಿನಾಯಿತಿ ಆಕೆಗೆ ದೊರೆತಿದೆ.

ADVERTISEMENT

ಸ್ಪರ್ಧಿಯು ತೋಳುಗಳಿಲ್ಲದ ಜೆರ್ಸಿ ಮತ್ತು ಮೊಣಕಾಲಿಗಿಂತ ಉದ್ದವಿಲ್ಲದಂತಹ ಉಡುಪು ಧರಿಸಿರಬೇಕು ಎಂಬ ನಿಯಮವನ್ನು ಯುಎಸ್‌ಎ ಬಾಕ್ಸಿಂಗ್‌ ಸಂಸ್ಥೆ ಸಡಿಲಿಸಿದೆ. ಯುಎಸ್‌ಎ ಬಾಕ್ಸಿಂಗ್‌ ಆಯೋಜಿಸುವ ಸ್ಪರ್ಧೆಗಳಲ್ಲಿ ಮಾತ್ರ ಹಿಜಬ್‌ ಧರಿಸಲು ಆಕೆ ಅವಕಾಶ ಪಡೆದುಕೊಂಡಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.