ADVERTISEMENT

ಬುರ್ಖಾ ಧರಿಸಿದರೆ ₹ 6.5 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ಟಿಸಿನೊ (ಸ್ವಿಡ್ಜರ್ಲೆಂಡ್): ಸ್ವಿಡ್ಜರ್ಲೆಂಡ್‌ನ ಟಿಸಿನೊ ಪ್ರಾಂತದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿದರೆ 6500 ಪೌಂಡ್ ದಂಡ (ಸುಮಾರು ₹ 6.5 ಲಕ್ಷ) ದಂಡ ತೆರಬೇಕಾಗುತ್ತದೆ.

ಅಂಗಡಿ, ರೆಸ್ಟೋರೆಂಟ್, ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಾಹನ ಚಲಾಯಿಸುವಾಗ ಮಹಿಳೆಯರು ಬುರ್ಖಾ ಧರಿಸುವಂತಿಲ್ಲ ಎಂಬ ಕಾನೂನನ್ನು ಇಲ್ಲಿನ ಪ್ರಾಂತೀಯ ಸರ್ಕಾರ ಜಾರಿ ಮಾಡಿದೆ.

ಪ್ಯಾರಿಸ್‌ ಸೇರಿದಂತೆ ಯೂರೋಪ್‌ನಲ್ಲಿ ಈಚಗೆ ನಡೆದ ಉಗ್ರರ ದಾಳಿಗಳ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಸೇರಿದಂತೆ, ವ್ಯಕ್ತಿಯ ಗುರುತನ್ನು ಮರೆ
ಮಾಚುವ ಧಿರಿಸನ್ನು ಧರಿಸುವುದಕ್ಕೂ ನಿಷೇಧ ಹೇರಬೇಕು ಎಂಬ ಒತ್ತಡ ಟಿಸಿನೊ ಸರ್ಕಾರದ ಮೇಲಿತ್ತು.

ಆದರೆ ಸರ್ಕಾರ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾವನ್ನು ಮಾತ್ರ ನಿಷೇಧಿಸಿ ಆದೇಶ ಹೊರಡಿಸಿದೆ. ಪ್ರವಾಸಿಗರಿಗೂ ಈ ನಿಷೇಧದಿಂದ ವಿನಾಯಿತಿ ಇಲ್ಲ. ವಿಮಾನ ನಿಲ್ದಾಣಗಳು ಮತ್ತು ಗಡಿ ಪ್ರದೇಶಗಳಲ್ಲಿ ಈ ಬಗ್ಗೆ ಬೃಹತ್‌ ಗಾತ್ರದ ಜಾಹೀರಾತುಗಳನ್ನು ಪ್ರದರ್ಶಿಸುವುದಾಗಿ ಸರ್ಕಾರ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.