ADVERTISEMENT

ಬ್ರಿಟನ್: ಜೂನ್ 8ಕ್ಕೆ ಸಾರ್ವತ್ರಿಕ ಚುನಾವಣೆ

ಪಿಟಿಐ
Published 18 ಏಪ್ರಿಲ್ 2017, 17:45 IST
Last Updated 18 ಏಪ್ರಿಲ್ 2017, 17:45 IST
ತೆರೆಸಾ ಮೇ
ತೆರೆಸಾ ಮೇ   

ಲಂಡನ್‌(ಎಎಫ್‌ಪಿ): ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಅವಧಿಗೂ ಮುನ್ನವೇ ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಮಹತ್ವದ ನಿರ್ಧಾರ
ಕೈಗೊಳ್ಳಲಾಗಿದೆ.

‘ಇದೇ ಜೂನ್‌ 8ರಂದು  ಸಾರ್ವತ್ರಿಕ ಚುನಾವಣೆ ನಡೆಯಲಿದೆ’ ಎಂದು ಪ್ರಧಾನಿ ತೆರೆಸಾ ಮೇ ಘೋಷಿಸಿದ್ದಾರೆ.

‘ಐರೋಪ್ಯ ಒಕ್ಕೂಟದಿಂದ ಹೊರಬರಲು ಸಿದ್ಧತೆ ನಡೆಸುತ್ತಿರುವ ಬ್ರಿಟನ್‌ ರಾಜಕೀಯವಾಗಿ ಸ್ಥಿರತೆ ಸಾಧಿಸಲು ಈ ನಿರ್ಧಾರ ಅಗತ್ಯವಾಗಿತ್ತು’ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

2011ರಲ್ಲಿ ಜಾರಿಗೆ ಬಂದ ಸ್ಥಿರ ಅವಧಿಯ ಸಂಸತ್‌ ಕಾಯ್ದೆಯ ಪ್ರಕಾರ ಪ್ರತೀ ಐದನೇ ವರ್ಷದ ಮೇ ತಿಂಗಳ   ಮೊದಲ ಗುರುವಾರದಂದು ಚುನಾವಣೆ ನಡೆಯಬೇಕು. ಈ ಕಾಯ್ದೆ ಅನ್ವಯವೇ 2015ರ ಮೇ 7ರಂದು ಚುನಾವಣೆ ನಡೆದಿತ್ತು. ಹೀಗಾಗಿ ಮುಂದಿನ ಚುನಾವಣೆ 2020ಕ್ಕೆ  ನಡೆಯಬೇಕಿತ್ತು. ಆದರೆ, ಮೂರು ವರ್ಷ ಮೊದಲೇ ಚುನಾವಣೆ ನಡೆಸುವ ನಿರ್ಧಾರ ಘೋಷಿಸುವ ಮೂಲಕ ಪ್ರಧಾನಿ ರಾಜಕೀಯ ವಲಯದಲ್ಲಿ ಅಚ್ಚರಿ
ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.