ADVERTISEMENT

ಭಾರತದ ಡ್ರೋನ್‌ ಪ್ರವೇಶಕ್ಕೆ ಆಕ್ಷೇಪ

ಪಿಟಿಐ
Published 7 ಡಿಸೆಂಬರ್ 2017, 19:26 IST
Last Updated 7 ಡಿಸೆಂಬರ್ 2017, 19:26 IST
ಭಾರತದ ಡ್ರೋನ್‌ ಪ್ರವೇಶಕ್ಕೆ ಆಕ್ಷೇಪ
ಭಾರತದ ಡ್ರೋನ್‌ ಪ್ರವೇಶಕ್ಕೆ ಆಕ್ಷೇಪ   

ಬೀಜಿಂಗ್‌: ‘ತನ್ನ ವಾಯುನೆಲೆಯನ್ನು ಅತಿಕ್ರಮವಾಗಿ ಪ್ರವೇಶಿಸಿದ ಭಾರತದ ಡ್ರೋನ್‌, ಬಳಿಕ ಸಿಕ್ಕಿಂ ವಲಯದಲ್ಲಿ ಪತನಗೊಂಡಿದೆ’ ಎಂದು ಚೀನಾ ಗುರುವಾರ ಹೇಳಿದೆ.

‘ಡ್ರೋನ್‌ ಅಕ್ರಮ ಪ್ರವೇಶದಿಂದಾಗಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ’ ಎಂದು ಚೀನಾ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದೆ.

ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್‌ ಶುಯಾಂಗ್‌ ಇದನ್ನು ಖಚಿತಪಡಿಸಿದ್ದಾರೆ. ಆದರೆ, ಈ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿಲ್ಲ.

ADVERTISEMENT

‘ಚೀನಾ ಗಡಿಗೆ ಸಮೀಪದಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸುವುದನ್ನು ಭಾರತ ನಿಲ್ಲಿಸಬೇಕು. ಗಡಿಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು’ ಎಂದು ಜೆಂಗ್‌ ಅವರು ಹೇಳಿದ್ದಾರೆ.

ಭಾರತ ಸ್ಪಷ್ಟನೆ: ‘ತಾಂತ್ರಿಕ ದೋಷದಿಂದಾಗಿ ಡ್ರೋನ್‌ ಚೀನಾದ ವಾಯುನೆಲೆ ಪ್ರವೆಶಿಸಿದೆ. ಈ ಬಗ್ಗೆ ಚೀನಾಕ್ಕೆ ಮಾಹಿತಿ ನೀಡಲಾಗಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೆಳಿದೆ.

ರಷ್ಯಾ–ಭಾರತ–ಚೀನಾ (ಆರ್‌ಐಸಿ) ವಿದೇಶಾಂಗ ಸಚಿವರ ಸಭೆ ಇದೇ 11ರಂದು ನವದೆಹಲಿಯಲ್ಲಿ ನಡೆಯಲಿದ್ದು, ಚೀನಾ ವಿದೆಶಾಂಗ ಸಚಿವ ವಾಂಗ್‌ ಯಿ ಅವರು ಭಾಗವಹಿಸಲಿದ್ದಾರೆ. ದೋಕಲಾ ಬಿಕ್ಕಟ್ಟಿನ ನಂತರ ಚೀನಾ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.