ADVERTISEMENT

ಭಾರತದ ಬದ್ಧತೆಗೆ ಅಮೆರಿಕ ಮೆಚ್ಚುಗೆ

ಅಣ್ವಸ್ತ್ರ ಪ್ರಸರಣ ನಿಷೇಧ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 11:36 IST
Last Updated 28 ಜೂನ್ 2016, 11:36 IST
ಭಾರತದ ಬದ್ಧತೆಗೆ ಅಮೆರಿಕ ಮೆಚ್ಚುಗೆ
ಭಾರತದ ಬದ್ಧತೆಗೆ ಅಮೆರಿಕ ಮೆಚ್ಚುಗೆ   

ವಾಷಿಂಗ್ಟನ್‌(ಪಿಟಿಐ): ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್‌)ಯಲ್ಲಿ ಭಾರತ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಅಣ್ವಸ್ತ್ರ ಪ್ರಸರಣ ತಡೆಯುವಲ್ಲಿ ಭಾರತ ಬದ್ಧತೆ ಮೆರೆದಿದೆ ಎಂದು ಹೇಳಿದೆ.

ಭಾರತ ಎಂಟಿಸಿಆರ್‌ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ತನ್ನ ಬದ್ಧತೆಯನ್ನು ಮನವರಿಕೆ ಮಾಡಿಕೊಟ್ಟಿದೆ. ಈ ವಿಷಯದಲ್ಲಿ ಕಾನೂನಾತ್ಮಕವಾಗಿ ನಡೆದುಕೊಂಡಿದೆ ಹಾಗೂ ಎಂಟಿಸಿಆರ್‌ನ ನೀತಿ, ನಿಯಮಗಳ ಪಾಲನೆ ಮಾಡಿದೆ ಎಂದು ಅಮೆರಿಕ ಸರ್ಕಾರದ ವಕ್ತಾರರಾದ ಎಲಿಜಬೆತ್‌ ಟ್ರುಡೆ ಅವರು ಹೇಳಿದ್ದಾರೆ.

ಅಮೆರಿಕ ಸೇರಿದಂತೆ ಎಲ್ಲಾ 34 ಸದಸ್ಯ ರಾಷ್ಟ್ರಗಳು ಭಾರತದ ಮನವಿಯನ್ನು ಒಪ್ಪಿಕೊಂಡಿವೆ. ಭಾರತ ಸದಸ್ಯತ್ವ ಪಡೆದಿರುವುದು ಅಂತರರಾಷ್ಟ್ರೀಯಮಟ್ಟದಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧದ ಕ್ರಮವನ್ನು ಮತ್ತಷ್ಟು ಬಲಪಡಿಸಿದೆ ಎಂದು ಟ್ರುಡೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.