ADVERTISEMENT

ಭಾರತೀಯರ ಕರೆತರಲು ಸೌದಿ ನೆರವಿನ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 10:07 IST
Last Updated 31 ಮಾರ್ಚ್ 2015, 10:07 IST
ಯೆಮನ್ ನಲ್ಲಿ ಬಂಡುಕೋರರನ್ನು ಗುರಿಯಾಗಿಸಿ ನಡೆಯುತ್ತಿರುವ ವೈಮಾನಿಕ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆದ ದೃಶ್ಯ. -ಎಪಿ ಚಿತ್ರ
ಯೆಮನ್ ನಲ್ಲಿ ಬಂಡುಕೋರರನ್ನು ಗುರಿಯಾಗಿಸಿ ನಡೆಯುತ್ತಿರುವ ವೈಮಾನಿಕ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆದ ದೃಶ್ಯ. -ಎಪಿ ಚಿತ್ರ   

ನವದೆಹಲಿ(ಐಎಎನ್ ಎಸ್): ಹಿಂಸಾಚಾರ ಪೀಡಿತ ಯೆಮನ್ ನಲ್ಲಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಲು ಸಹಕಾರ ನೀಡುವುದಾಗಿ ಸೌದಿ ಅರೇಬಿಯಾ ಭಾರತಕ್ಕೆ ಭರವಸೆ ನೀಡಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರು ಮಂಗಳವಾರ ಯೆಮನ್ ನ ಡಿಜಿಬೋಟಿ ನಗರಕ್ಕೆ ತೆರಳಿದ್ದು, ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಬೇಕಿರುವ ಸಿದ್ಧತೆ ನಡೆಸಿದ್ದಾರೆ.

ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಆಲ್ ಸೌದ್ ಅವರ ಜತೆ ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ‘ಭಾರತೀಯರನ್ನು ಸುರಕ್ಷಿತವಾಗಿ ಯೆಮನ್ ನಿಂದ ಕಳುಹಿಸಿಕೊಡಲು ಎಲ್ಲಾ ರೀತಿಯ ನೆರವು ಹಾಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸೌದಿ ದೊರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.