ADVERTISEMENT

ಭಾರತೀಯ ಸೇನೆ ಎದುರಿಸಲು ಅಣ್ವಸ್ತ್ರ ಬಳಕೆ: ಅಬ್ಬಾಸಿ ಎಚ್ಚರಿಕೆ

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಶಾಹೀದ್‌ ಖಾನ್‌ ಅಬ್ಬಾಸಿ
ಶಾಹೀದ್‌ ಖಾನ್‌ ಅಬ್ಬಾಸಿ   

ನ್ಯೂಯಾರ್ಕ್‌ : ಪಾಕಿಸ್ತಾನವು ಕಡಿಮೆ ಅಂತರದ ಅಣ್ವಸ್ತ್ರಗಳನ್ನು ಹೊಂದಿದೆ. ಭಾರತದ ಸೇನೆಗೆ ದಿಟ್ಟ ಉತ್ತರ ನೀಡಲು ಅಗತ್ಯವಾದರೆ ಇದನ್ನು ಬಳಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಖಾನ್‌ ಅಬ್ಬಾಸಿ  ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಕ್ಕೆ ಚೊಚ್ಚಲ ಪ್ರವಾಸ ಕೈಗೊಂಡಿರುವ ಅವರು ಪಾಕಿಸ್ತಾನದ ಶಸ್ತ್ರಾಗಾರವನ್ನು ಸಂರಕ್ಷಿಸಲಾಗಿದೆ ಎಂದಿದ್ದಾರೆ.

‘ಜಾಗತಿಕವಾಗಿ ಪಾಕಿಸ್ತಾನವೂ ಅತ್ಯಂತ ವೇಗವಾಗಿ ಪರಮಾಣು ಶಸ್ತ್ರಾಸ್ತ್ರ ಹೊಂದುತ್ತಿರುವ ರಾಷ್ಟ್ರವಾಗಿದೆ. ಭಾರತದ ಸೇನೆಯನ್ನು ನಾಶಪಡಿಸುವ ಅಲ್ಪಶ್ರೇಣಿಯ ಶಸ್ತ್ರಾಸ್ತ್ರಗಳಿವೆ. ಅಗತ್ಯಬಿದ್ದರೆ ಅದನ್ನು ಬಳಸಲು ಹಿಂಜರಿಯುವುದಿಲ್ಲ. ಭಾರತ ಆರಂಭಿಸಿರುವ ಶೀತಲಯುದ್ಧಕ್ಕೆ ಪ್ರತಿಯಾಗಿ, ನಮ್ಮ ಸುರಕ್ಷತೆಗಾಗಿ ಅಣ್ವಸ್ತ್ರಗಳನ್ನು ಸಂಗ್ರಹಿಸುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.