ADVERTISEMENT

ಭಾರತ ಮೂಲದ ಅಧಿಕಾರಿಗೆ ಬ್ರಿಟನ್‌ನ ಶೌರ್ಯ ಪ್ರಶಸ್ತಿ

ಪಿಟಿಐ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಭಾರತ ಮೂಲದ ಅಧಿಕಾರಿಗೆ ಬ್ರಿಟನ್‌ನ ಶೌರ್ಯ ಪ್ರಶಸ್ತಿ
ಭಾರತ ಮೂಲದ ಅಧಿಕಾರಿಗೆ ಬ್ರಿಟನ್‌ನ ಶೌರ್ಯ ಪ್ರಶಸ್ತಿ   

ಲಂಡನ್ : ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಯೊಂದರಿಂದ ತಮ್ಮ ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಭಾರತ ಮೂಲದ ಸ್ಕಾಟ್ಲೆಂಡ್‌ ಯಾರ್ಡ್  ಅಧಿಕಾರಿಯೊಬ್ಬರಿಗೆ ಬ್ರಿಟನ್‌ನ ಶೌರ್ಯ ಪ್ರಶಸ್ತಿ ದೊರೆತಿದೆ.

ಪೊಲೀಸ್‌ ಅಧಿಕಾರಿಗಳಾದ ಶಾಂದ್ ಪನೇಸರ್ ಮತ್ತು ಅವರ ಸಹೋದ್ಯೋಗಿ ಕ್ರೇಗ್ ನಿಕೊಲ್ಸನ್ ಅವರು ಜಂಟಿಯಾಗಿ ಈ ಪ್ರಶಸ್ತಿ ಪಡೆದಿದ್ದಾರೆ.
ವರ್ಷದ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡುವ ಮತದಾನ ಪ್ರಕ್ರಿಯೆಯಲ್ಲಿ ಲಂಡನ್‌ನ  ಸಾವಿರಾರು ನಾಗರಿಕರು ಭಾಗವಹಿಸಿದ್ದರು.

ಸುರಕ್ಷತಾ ಸಾಧನ ಇಲ್ಲದೆ ರಕ್ಷಣೆ:  2016ರ ಸೆಪ್ಟೆಂಬರ್‌ನಲ್ಲಿ ಹಿಲ್ಲಿಂಗ್ಡನ್‌ನ ಮನೆಯೊಂದರಲ್ಲಿ ಬೆಂಕಿಹೊತ್ತಿಕೊಂಡಿತ್ತು. ಈ ಮನೆಯಲ್ಲಿ ಇಬ್ಬರು ಸಿಲುಕಿಕೊಂಡಿದ್ದರು.  ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಮುನ್ನವೇ ಬಂದ ಪನೇಸರ್‌ ಮತ್ತು ನಿಕೊಲ್ಸನ್‌ ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸದೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಇಳಿದರು. ದಟ್ಟ ಹೊಗೆ ನಡುವೆಯೂ ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.