ADVERTISEMENT

ಮಂಗಳನಲ್ಲಿ ಅಂತರ್ಜಲ! ಹೊಸ ಸಾಕ್ಷ್ಯಾಧಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 11:12 IST
Last Updated 29 ಮಾರ್ಚ್ 2015, 11:12 IST

ಲಂಡನ್(ಐಎಎನ್ಎಸ್): ಕೆಂಪು ಗ್ರಹ ಮಂಗಳನಲ್ಲಿ ಅಂತರ್ಜಲ ಇರುವಿಕೆಗೆ ಹೊಸ ಸಾಕ್ಷ್ಯಾಧಾರವೊಂದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಮಂಗಳನಲ್ಲಿ ಅಂತರ್ಜಲ ನಿಕ್ಷೇಪದ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನಿಗಳ ತಂಡ ಮಂಗಳನ ಮೇಲ್ಮೈನ ವಿಷುವದ್ಬಿಂದುವಿನಲ್ಲಿಯ ಶಂಕುವಿನಾಕಾರದ ಕುಳಿ ಪ್ರದೇಶದಲ್ಲಿ ಸಂಶೋಧನೆ ಕೈಗೊಂಡಿದ್ದು, ಅಂತರ್ಜಲ ನಿಕ್ಷೇಪ ಪತ್ತೆ ಮಾಡಿದ್ದಾರೆ ಎಂದು ಹೊಸ ಸಂಶೋಧನೆ ಕುರಿತು ಜಿಎಸ್ ಎ ಬುಲೆಟಿನ್ ಪ್ರಕಟಿಸಿದೆ.

ಮಂಗಳನ ಮೇಲ್ಮೈನ ಪ್ರಸ್ಥಭೂಮಿ ಅಪರೂಪದ ದಿಣ್ಣೆ, ಅಡ್ಡ ದಿಣ್ಣೆ, ದಿಬ್ಬಗಳಿಂದ ಕೂಡಿದೆ ಎಂದು ವಿವರಿಸಿದ್ದಾರೆ.
ಹಳ್ಳದ ಸ್ವರೂಪ, ಶಂಕುವಿನಾಕಾರದ ಕುಳಿ ಪ್ರದೇಶದ ವಿವರವಾದ ಭೂವೈಜ್ಞಾನಿಕ ನಕ್ಷೆಯನ್ನು ನಿರ್ಮಿಸಿದ್ದಾಗಿ ಇದು ಸಂಶೋಧನೆಗೆ ಸಾಕ್ಷ್ಯಾಧಾರವಾಗಿದೆ ಎಂದು ಹೇಳಿದ್ದಾರೆ. ಹೊಸ ನಕ್ಷೆ ಕುಳಿಗಳ ಎಣಿಕೆ, ಸಂಬಂಧಗಳ ಹಾಗೂ ಜ್ಯಾಮಿತಿಯ ಮತ್ತು ಸಂಯೋಜಿತ ನಿರ್ಬಂಧಗಳನ್ನು ವಿಶ್ಲೇಷಿಸುತ್ತದೆ ಎಂದಿದ್ದಾರೆ.

ಇಟಲಿ ಮೂಲದ ‘ಪ್ಲಾನೆಟರಿ ಸೈನ್ಸ್ ಆಫ್ ಇಂಟರ್ ನ್ಯಾಷನಲ್ ರೀಸರ್ಚ್ ಸ್ಕೂಲ್’ನ ಪ್ರಮುಖ ಸಂಶೋಧಕ ಮೋನಿಕ್ ಅವರು, ಮಂಗಳನ ಉತ್ತರಾರ್ಧಗೋಳದಲ್ಲಿನ ಪ್ರಸ್ಥಭೂಮಿಯಲ್ಲಿ ನಿಕ್ಷೇಪಗಳ ಇರುವಿಕೆಯ ಕುರಿತು, ‘ಮಂಗಳನ ಘನೀಕರಿಸುವ ಮೇಲ್ಮೈ ತಾಪನಾನದಿಂದಾಗಿ ಜಲವಿಜ್ಞಾನ ಚಕ್ರದ ಆಧಾರದ ಮೇಲೆ ಅಂತರ್ಜಲದ ಉಪಸ್ಥಿತಿಯನ್ನು ಪರಿಗಣಿಸಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT