ADVERTISEMENT

ಮನಮೋಹನ್ ಸಿಂಗ್ ಪಾಕಿಸ್ತಾನದ ಅಧ್ಯಕ್ಷ!

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಇಸ್ಲಾಮಾಬಾದ್ (ಪಿಟಿಐ): ‘ಪಾಕಿಸ್ತಾನ್ ಇನ್‌ಸ್ಟಿ­ಟ್ಯೂಟ್ ಆಫ್ ಡೆವಲಪ್‌ಮೆಂಟ್ ಎಕನಾಮಿಕ್ಸ್’ ಎಂಬ ಪಾಕಿಸ್ತಾ­ನದ   ಮುಂಚೂಣಿಯ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯೊಂದು ತನ್ನ ವಾರ್ಷಿಕ ಘಟಿಕೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ ಅಧ್ಯಕ್ಷ ಎಂದು ಮುದ್ರಿಸಿದೆ.

ಇದೇ 28ರಂದು ನಡೆಯಲಿರುವ ಸಂಸ್ಥೆಯ ಘಟಿಕೋತ್ಸವದ ಆಹ್ವಾನ ಪತ್ರಿಕೆ­ಯಲ್ಲಿ, ‘ಪ್ರೆಸಿಡೆಂಟ್ ಆಫ್ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್, ಮನಮೋಹನ್ ಸಿಂಗ್’ ಎಂದು ತಪ್ಪಾಗಿ ಮುದ್ರಿಸಿದೆ ಎನ್ನಲಾಗಿದೆ. ಸಿಂಗ್ ಅವರ ಹೆಸರಿನ ಬದಲು ಪಾಕ್ ಅಧ್ಯಕ್ಷ ಮಮ್ನೂನ್ ಹುಸೇನ್ ಹೆಸರು ಇರಬೇಕಿತ್ತು. ಇದು ಪತ್ತೆಯಾಗುವ  ಮುನ್ನವೇ  ಸಾಕಷ್ಟು ಜನರಿಗೆ ಆಹ್ವಾನ ಪತ್ರಿಕೆ ಹಂಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.