ADVERTISEMENT

ಮರುಭೂಮಿಯಲ್ಲಿ ಕುರಿಗಾಹಿ ಸಾವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2015, 19:30 IST
Last Updated 1 ಜೂನ್ 2015, 19:30 IST

ದುಬೈ (ಪಿಟಿಐ): ಭಾರತ ಮೂಲದ ಕುರಿಗಾಹಿಯೊಬ್ಬರು ಕುವೈತ್‌ನ ಮರುಭೂಮಿ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಬಾಯಾರಿಕೆ ಹಾಗೂ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕುರಿಗಾಹಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಕಾಷಾನಿಯಾದ ಮರುಭೂಮಿ ಪ್ರದೇಶದಲ್ಲಿ ಮೇ 28ರಂದು ಕುರಿಗಾಹಿಯ ಮೃತದೇಹ ಪತ್ತೆಯಾಗಿದೆ’ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ. ‘ನಿಯಮದ ಪ್ರಕಾರ, ಭಾರತೀಯರು ಕುರಿಗಾಹಿ ಕೆಲಸದಲ್ಲಿ ತೊಡಗಿಕೊಳ್ಳಲು ಅನುಮತಿ ಇಲ್ಲ. ಆದರೆ ಅವರನ್ನು ಬಲವಂತವಾಗಿ ಕೆಲಸದಲ್ಲಿ ತೊಡಗಿಸಿದ ಕೆಲವು ಉದಾಹರಣೆಗಳಿವೆ’ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಕೆಲಸದ ಒಪ್ಪಂದ ಉಲ್ಲಂಘಿಸಿ ಭಾರತೀಯರನ್ನು ಕುರಿಗಾಹಿ ಕೆಲಸದಲ್ಲಿ ತೊಡಗಿಕೊಳ್ಳಲು ಬಲವಂತ ಮಾಡಿದಲ್ಲಿ ಭಾರತದ ರಾಯಭಾರ ಕಚೇರಿ ಸಂಪರ್ಕಿಸುವಂತೆ’ ಅದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.