ADVERTISEMENT

ಮುಸ್ಲಿಮರ ಪ್ರವೇಶ ನಿರ್ಬಂಧ: ಟ್ರಂಪ್‌ಗೆ ಮತ್ತೆ ಹಿನ್ನಡೆ

ಏಜೆನ್ಸೀಸ್
Published 26 ಮೇ 2017, 19:30 IST
Last Updated 26 ಮೇ 2017, 19:30 IST

ವಾಷಿಂಗ್ಟನ್‌:  ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರ ಅಮೆರಿಕ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪರಿಷ್ಕೃತ ಆದೇಶಕ್ಕೆ ಫೆಡರಲ್‌ ಮೇಲ್ಮನವಿ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. 

‘ಪ್ರವೇಶ ನಿರ್ಬಂಧ ಆದೇಶವು ರಾಷ್ಟ್ರೀಯ ಭದ್ರತೆ ಕುರಿತು ಅಸ್ಪಷ್ಟವಾಗಿ ವಿವರಿಸುತ್ತದೆ. ಅಲ್ಲದೆ ಅದರಲ್ಲಿ ಧಾರ್ಮಿಕ ಅಸಹಿಷ್ಣುತೆ,   ದ್ವೇಷ ಮತ್ತು ತಾರತಮ್ಯ ಇಣುಕುತ್ತಿದೆ’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT