ADVERTISEMENT

‘ಮ್ಯಾಥ್ಯೂ’ ಚಂಡಮಾರುತ ಹೈಟಿಯಲ್ಲಿ 300 ಮಂದಿ ಬಲಿ

ಏಜೆನ್ಸೀಸ್
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST
ಮ್ಯಾಥ್ಯೂ ಚಂಡಮಾರುತ ಬೀಸಿದ ನಂತರ ಹೈಟಿಯ ನಗರವೊಂದರಲ್ಲಿ ರಾಶಿಯಾಗಿದ್ದ ಅವಶೇಷಗಳಲ್ಲಿ ಅಳಿದುಳಿದ ವಸ್ತುಗಳಿಗಾಗಿ ಸ್ಥಳೀಯರು ಹುಡುಕಾಡಿದರು  – ಎಎಫ್‌ಪಿ ಚಿತ್ರ
ಮ್ಯಾಥ್ಯೂ ಚಂಡಮಾರುತ ಬೀಸಿದ ನಂತರ ಹೈಟಿಯ ನಗರವೊಂದರಲ್ಲಿ ರಾಶಿಯಾಗಿದ್ದ ಅವಶೇಷಗಳಲ್ಲಿ ಅಳಿದುಳಿದ ವಸ್ತುಗಳಿಗಾಗಿ ಸ್ಥಳೀಯರು ಹುಡುಕಾಡಿದರು – ಎಎಫ್‌ಪಿ ಚಿತ್ರ   

ಮಿಯಾಮಿ: ಕೆರಿಬಿಯನ್‌ ದ್ವೀಪರಾಷ್ಟ್ರ ಹೈಟಿಯಲ್ಲಿ ಭೀಕರ ಮ್ಯಾಥ್ಯೂ ಚಂಡಮಾರುತ ಅನಾಹುತ ಸೃಷ್ಟಿಸಿದ್ದು, ಸುಮಾರು 300 ಮಂದಿ ಸಾವಿಗೀಡಾಗಿದ್ದಾರೆ. ಗಂಟೆಗೆ  ಸುಮಾರು 130  ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಭಾರಿ ಅನಾಹುತ ಉಂಟುಮಾಡಿದೆ.

ಚಂಡಮಾರುತದಿಂದ ಸೌತ್ ಕೆರೋಲಿನಾ ಮತ್ತು ಫ್ಲಾರಿಡಾದಲ್ಲಿ ತುಂಬ ಹಾನಿಯಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಈ ಪ್ರದೇಶಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಹಿಂದೆ 2007ರಲ್ಲಿ ಇಲ್ಲಿ ಇಂಥ ಚಂಡಮಾರುತ ಬೀಸಿತ್ತು. ಈ ಬಾರಿ ಫ್ಲಾರಿಡಾ, ಬಹಾಮಾ, ಜಾರ್ಜಿಯಾ, ಜಾಕ್‌ಸೋನ್‌ವಿಲೆ, ಸವನ್ಹಾ ಹಾಗೂ ಸೌತ್ ಕೆರೊಲಿನಾದಲ್ಲಿ ಲಕ್ಷಾಂತರ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಈಗಾಗಲೇ ಹೈಟಿ, ಜಮೈಕಾ, ಕ್ಯೂಬಾಕ್ಕೆ ಅಪ್ಪಳಿಸಿರುವ ಮ್ಯಾಥ್ಯೂ ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.ಚಂಡಮಾರುತದಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಮರಗಳು ರಸ್ತೆಗುರುಳಿದ್ದು, ವಿದ್ಯುತ್‌ ಕಡಿತಗೊಂಡಿದೆ. ಗ್ರಾಮ, ಪಟ್ಟಣಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.