ADVERTISEMENT

ಮ್ಯೂನಿಕ್‌ದಾಳಿಯಲ್ಲಿ 9 ಸಾವು; ದಾಳಿಕೋರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 11:17 IST
Last Updated 23 ಜುಲೈ 2016, 11:17 IST
ಮ್ಯೂನಿಕ್‌ದಾಳಿಯಲ್ಲಿ 9 ಸಾವು; ದಾಳಿಕೋರ ಆತ್ಮಹತ್ಯೆ
ಮ್ಯೂನಿಕ್‌ದಾಳಿಯಲ್ಲಿ 9 ಸಾವು; ದಾಳಿಕೋರ ಆತ್ಮಹತ್ಯೆ   

ಮ್ಯೂನಿಕ್‌(ಎಎಫ್‌ಪಿ): ಜರ್ಮನಿಯ ಮ್ಯೂನಿಕ್‌ ನಗರದ ಶಾಪಿಂಗ್‌ ಮಾಲ್‌ಗೆ ನುಗ್ಗಿ ಗುಂಡಿನ ದಾಳಿನ ನಡೆಸಿ ಒಂಬತ್ತು ಜನರ ಸಾವಿಗೆ ಕಾರಣನಾದ ದಾಳಿಕೋರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಜರ್ಮನಿಯ ಮೂರನೇ ದೊಡ್ಡ ನಗರ ಮ್ಯೂನಿಕ್‌. ಇಲ್ಲಿನ ಒಲಿಂಪಿಯಾ ಐಂಕಾಫ್‌ಜೆಂಟಿಮ್ಗೆ ಶಾಪಿಂಗ್‌ ಮಾಲ್‌ಗೆ ಶುಕ್ರವಾರ ನುಗಿದ್ದ ಬಂದೂಕುಧಾರಿ ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಗೆ ಒಂಬತ್ತು ಜನ ಸಾವಿಗೀಡಾಗಿದ್ದಾರೆ.

ಘಟನೆಯಲ್ಲಿ 16 ಜನ ಗಾಯಗೊಂಡಿದ್ದಾರೆ. ಯೂರೋಪ್‌ನ ನಾಗರಿಕರ ಮೇಲೆ ಎಂಟು ದಿನಗಳಲ್ಲಿ ನಡೆದ ಮೂರನೇ ದಾಳಿ ಇದಾಗಿದೆ.

ADVERTISEMENT

ಘಟನೆ ನಡೆಯುತ್ತಿದ್ದಂತೆ ಪೊಲೀಸ್‌ ಹಾಗೂ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಾಲ್‌ನಲ್ಲಿದ್ದ ಜನರನ್ನು ತೆರವುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.