ADVERTISEMENT

ರಿಚರ್ಡ್‌ ವರ್ಮಾ ಭಾರತದಲ್ಲಿನ ನೂತನ ಅಮೆರಿಕ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 12:31 IST
Last Updated 19 ಸೆಪ್ಟೆಂಬರ್ 2014, 12:31 IST

ವಾಷಿಂಗ್ಟನ್‌ (ಪಿಟಿಐ): ಭಾರತದಲ್ಲಿನ ಅಮೆರಿಕ ರಾಯಭಾರಿಯನ್ನಾಗಿ ಭಾರತೀಯ ಮೂಲದ ರಿಚರ್ಡ್‌ ರಾಹುಲ್‌ ವರ್ಮಾ ಅವರನ್ನು ನೇಮಕ ಮಾಡಲಾಗಿದೆ.

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಈ ನೇಮಕ ಮಾಡಿದ್ದಾರೆ ಎಂಬುದನ್ನು ಅಮೆರಿಕ ಸಂಸತ್‌ ಖಚಿತ ಪಡಿಸಿದೆ.

ವರ್ಮಾ ಅವರು ಈ ಹಿಂದೆ ಅಮೆರಿಕ ಸರ್ಕಾರದಲ್ಲಿನ ವಿವಿಧ ಉನ್ನತಮಟ್ಟದ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ರಾಯಭಾರಿಯಾಗಿ ಉನ್ನತ ಹುದ್ದೆಯನ್ನು ನಿರ್ವಹಿಸಲು ಭಾರತಕ್ಕೆ ಆಗಮಿಸುತ್ತಿದ್ದಾರೆ.

45 ವರ್ಷದ ವರ್ಮಾ ಅವರು ಒಬಾಮಾ ಮತ್ತು ಹಿಲರಿ ಕ್ಲಿಂಟನ್‌ ಅವರಿಗೆ ಆಪ್ತರು ಎನ್ನಲಾಗಿದೆ.

ಸೆ. 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಯಲ್ಲಿ ಈ ನೇಮಕಾತಿ ಮಹತ್ವ ಪಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT